ಪಾಟ್ನಾಕ್ಕೆ ಭರ್ಜರಿ ಜಯ
ಪ್ರೊ ಕಬಡ್ಡಿ ಲೀಗ್
ಅಹ್ಮದಾಬಾದ್, ನ.21: ಪರ್ದೀಪ್ ನರ್ವಾಲ್ ಹಾಗೂ ದೀಪಕ್ ನರ್ವಾಲ್ ಸಾಹಸದ ನೆರವಿನಿಂದ ಪಾಟ್ನಾ ಪೈರೇಟ್ಸ್ ತಂಡ ಇಲ್ಲಿ ಬುಧವಾರ ನಡೆದ ಪ್ರೊ ಕಬಡ್ಡಿ ಲೀಗ್ನಲ್ಲಿ ತಮಿಳ್ ತಲೈವಾಸ್ ತಂಡವನ್ನು 45-27 ಅಂತರದಿಂದ ಮಣಿಸಿದೆ.
ಪರ್ದೀಪ್ ಈ ಋತುವಿನಲ್ಲಿ 9ನೇ ಬಾರಿ 10ಕ್ಕೂ ಅಧಿಕ ಅಂಕ ಗಳಿಸಿದ್ದು, ಇಂದು ಅವರು 13 ಅಂಕ ಗಳಿಸಿದರು. ದೀಪಕ್ 10 ಹಾಗೂ ಮಂಜೀತ್ 8 ಅಂಕ ಗಳಿಸಿ ತಂಡದ ಗೆಲುವಿಗೆ ನೆರವಾದರು. ತಮಿಳ್ ಪರ ಅಜಯ್ ಠಾಕೂರ್(8)ಏಕಾಂಗಿ ಹೋರಾಟ ನೀಡಿದರು. ಪಾಟ್ನಾ 13 ಪಂದ್ಯಗಳಲ್ಲಿ 38 ಅಂಕ ಗಳಿಸಿ ಬಿ ಗುಂಪಿನಲ್ಲಿ 2ನೇ ಸ್ಥಾನದಲ್ಲಿದೆ. ತಲೈವಾಸ್ ಒಟ್ಟು 25 ಅಂಕ ಗಳಿಸಿ ಕೊನೆಯ ಸ್ಥಾನದಲ್ಲಿದೆ. ಮತ್ತೊಂದು ಪಂದ್ಯದಲ್ಲಿ ಆತಿಥೇಯ ಗುಜರಾತ್ ತಂಡ ಯೂ ಮುಂಬಾ ತಂಡವನ್ನು 39-35 ಅಂತರದಿಂದ ಮಣಿಸಿತು. ಗುಜರಾತ್ ಪರ ಪ್ರಪಂಜನ್ 10 ಅಂಕ ಗಳಿಸಿದರೆ, ಸಿದ್ದಾರ್ಥ್ ದೇಸಾಯಿ ಮುಂಬಾ ಪರ 13 ಅಂಕ ಗಳಿಸಿದರೂ ತಂಡವನ್ನು ಸೋಲಿನಿಂದ ಪಾರಾಗಿಸಲು ಸಾಧ್ಯವಾಗಲಿಲ್ಲ.
Next Story