ಪ್ರೊ ಕಬಡ್ಡಿ: ಪಾಟ್ನಾ, ಹರ್ಯಾಣಕ್ಕೆ ಗೆಲುವು
ಪುಣೆ, ನ.25: ಪ್ರೊ ಕಬಡ್ಡಿ ಲೀಗ್ನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಹಾಗೂ ಹರ್ಯಾಣ ಸ್ಟೀಲರ್ಸ್ ತಂಡಗಳು ಜಯ ಸಾಧಿಸಿವೆ.
ಪಾಟ್ನಾ ತಂಡ ಬೆಂಗಳೂರು ಬುಲ್ಸ್ ತಂಡವನ್ನು 35-32 ಅಂತರದಿಂದ ಮಣಿಸಿತು. ಪಾಟ್ನಾ ಪರ ಪರ್ದೀಪ್ ನರ್ವಾಲ್ 11 ಅಂಕ ಗಳಿಸಿದರು. ಬೆಂಗಳೂರು ಪರ ರೋಹಿತ್ ಕುಮಾರ್ 13 ಅಂಕ ಗಳಿಸಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು.
ಮತ್ತೊಂದು ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ತಂಡ ದಬಾಂಗ್ ದಿಲ್ಲಿ ತಂಡವನ್ನು 34-27 ಅಂತರದಿಂದ ಸೋಲಿಸಿತು. ಹರ್ಯಾಣದ ವಿಕಾಸ್(9) ಹಾಗೂ ದಿಲ್ಲಿಯ ನವೀನ್ ಕುಮಾರ್(10) ತಮ್ಮ ತಂಡದ ಪರ ಗರಿಷ್ಠ ಅಂಕ ಗಳಿಸಿದರು.
Next Story