ಪ್ರೊ ಕಬಡ್ಡಿ: ಬುಲ್ಸ್ಗೆ ತಿವಿದ ದಿಲ್ಲಿಗೆ ರೋಚಕ ಜಯ
ಹೊಸದಿಲ್ಲಿ, ಡಿ.5: ಚಂದ್ರಕಾಂತ್ ರಂಜಿತ್ ಹಾಗೂ ಮೆರಾಜ್ ಶೇಕ್ ಅಪೂರ್ವ ಪ್ರದರ್ಶನದ ನೆರವಿನಿಂದ ದಿಲ್ಲಿ ದಬಾಂಗ್ ತಂಡ ಬಲಿಷ್ಠ ಬೆಂಗಳೂರು ಬುಲ್ಸ್ ತಂಡವನ್ನು 32-31 ಅಂತರದಿಂದ ರೋಚಕವಾಗಿ ಮಣಿಸಿತು.
ಇಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ದಿಲ್ಲಿ ಪರ ರಂಜಿತ್ 9 ಅಂಕ ಹಾಗೂ ಶೇಕ್ 7 ಅಂಕ ಗಳಿಸಿ ತಂಡದ ಗೆಲುವಿಗೆ ನೆರವಾದರು. ಈ ಗೆಲುವಿನ ಮೂಲಕ ದಿಲ್ಲಿ ತಂಡ ಪ್ಲೇ-ಆಫ್ಗೆ ಅರ್ಹತೆ ಪಡೆಯುವತ್ತ ಹೆಜ್ಜೆ ಇಟ್ಟಿದೆ.
ಬುಲ್ಸ್ ನಾಯಕ ರೋಹಿತ್ ಕುಮಾರ್(12 ಅಂಕ)ಹಾಗೂ ಪವನ್ ಕುಮಾರ್(10)ಹೋರಾಟ ವ್ಯರ್ಥವಾಯಿತು. ಸ್ಥಿರ ಪ್ರದರ್ಶನ ನೀಡುತ್ತಿರುವ ಬುಲ್ಸ್ ‘ಬಿ’ ವಲಯದಲ್ಲಿ ಅಗ್ರ ಸ್ಥಾನದಲ್ಲಿದೆ.
ದಿನದ ಮೊದಲ ಪಂದ್ಯದಲ್ಲಿ ಹರ್ಯಾಣ ತಂಡ ಕೊನೆಯ ಕ್ಷಣದಲ್ಲಿ ಬಂಗಾಳ ವಾರಿಯರ್ಸ್ ವಿರುದ್ಧ 35-33 ಅಂತರದಿಂದ ಜಯ ಸಾಧಿಸಿತು. ಕಬಡ್ಡಿ ಲೀಗ್ ಇತಿಹಾಸದಲ್ಲಿ 2ನೇ ಬಾರಿ ಮುಖಾಮುಖಿಯಾದ ಉಭಯ ತಂಡಗಳ ಪೈಕಿ ಹರ್ಯಾಣ ಪರ ಮೋನು ಗೋಯತ್ 12 ಅಂಕ ಗಳಿಸಿ ಗೆಲುವಿನ ಕಾಣಿಕೆ ನೀಡಿದರು.
ಬಂಗಾಳದ ಪರ ಮಣಿಂದರ್ ಸಿಂಗ್ 11 ಹಾಗೂ ರವೀಂದ್ರ 7 ಅಂಕ ಗಳಿಸಿದರು.
Next Story