ಕ್ವಾರ್ಟರ್ಫೈನಲ್ಗೆ ಮಾನವ್ ಥಕ್ಕರ್
ವಿಶ್ವ ಜೂನಿಯರ್ ಟಿಟಿ ಚಾಂಪಿಯನ್ಶಿಪ್
ಬೆಂಡಿಗೊ( ಆಸ್ಟ್ರೇಲಿಯ), ಡಿ.8: ಭಾರತದ ಭರವಸೆಯ ಟೇಬಲ್ ಟೆನಿಸ್ ತಾರೆ ಮಾನವ್ ಥಕ್ಕರ್ 2018ರ ವಿಶ್ವ ಜೂನಿಯರ್ ಚಾಂಪಿಯನ್ಶಿಪ್ನ ಕ್ವಾರ್ಟರ್ಫೈನಲ್ಗೆ ಲಗ್ಗೆಯಿಟ್ಟಿದ್ದಾರೆ. ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಅವರು, ತೈವಾನ್ನ ಫೆಂಗ್ ಯಿ -ಸಿನ್ರನ್ನು 11-7, 8-11, 11-4, 9-11, 14-12, 11-1 ಗೇಮ್ಗಳ ಅಂತರದಿಂದ ಮಣಿಸಿದರು. 2ನೇ ಶ್ರೇಯಾಂಕದ ಮಾನವ್, ಕ್ವಾರ್ಟರ್ ಫೈನಲ್ನಲ್ಲಿ ಚೀನಾದ ಕ್ಸಿಯಾಂಗ್ ಪೆಂಗ್ರನ್ನು ಎದುರಿಸಲಿದ್ದಾರೆ. ಅರ್ಜೆಂಟೀನದ ಮಾರ್ಟಿನ್ ಬೆಂಟಾಂಕೋರ್ ಹಾಗೂ ಸ್ಯಾಂಟಿಯಾಗೊ ಲೊರೆಂರೊ ಜೋಡಿಯನ್ನು ಬಗ್ಗುಬಡಿದಿರುವ ಭಾರತದ ಮಾನವ್ ಹಾಗೂ ಮಾನುಷ್ ಶಾ ಜೋಡಿ, ಟೂರ್ನಿಯ ಡಬಲ್ಸ್ ವಿಭಾಗದಲ್ಲೂ ಕ್ವಾರ್ಟರ್ಫೈನಲ್ಗೆ ಪ್ರವೇಶ ಪಡೆದಿದೆ.
ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಜೀತ್, ರೋಮಾನಿಯಾದ ಕ್ರಿಶ್ಚಿಯನ್ ವಿರುದ್ಧ 8-11, 5-11, 8-11, 8-11ರಿಂದ ಸೋಲನ್ನಪ್ಪಿದರೆ ಮಾನುಷ್ ಸಿಂಗಪೂರ್ನ ಪ್ಯಾಂಗ್-ಯೆವ್ ಎನ್ ಕೋಯ ವಿರುದ್ಧ 32ನೇ ಸುತ್ತಿನ ಪಂದ್ಯದಲ್ಲಿ 11-6, 9-11, 11-4, 5-11, 4-11, 7-11ರಿಂದ ಹೋರಾಡಿ ಸೋಲೊಪ್ಪಿಕೊಂಡರು.