ಬಾರ್ಸಿಲೋನಕ್ಕೆ ಗೆಲುವು ಲಿಯೊನೆಲ್ ಮೆಸ್ಸಿ ಮಿಂಚು
ಮ್ಯಾಡ್ರಿಡ್, ಡಿ.9: ಅರ್ಜೆಂಟೀನದ ಸ್ಟಾರ್ ಲಿಯೊನೆಲ್ ಮೆಸ್ಸಿಯ ಸೊಗಸಾದ ಅವಳಿ ಗೋಲುಗಳ ನೆರವಿನಿಂದ ಬಾರ್ಸಿಲೋನ ಫುಟ್ಬಾಲ್ ತಂಡವು ಎಸ್ಪಾನಿಯೊಲ್ ತಂಡವನ್ನು 4-0 ಅಂತರದಿಂದ ಮಣಿಸಿ ಲಾಲಿಗಾ ಟೂರ್ನಿಯಲ್ಲಿ ಮುನ್ನಡೆ ಸಾಧಿಸಿದೆ. ಇಲ್ಲಿನ ಆರ್ಸಿಡಿಇ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎರಡು ಮನಮೋಹಕ ಫ್ರಿ ಕಿಕ್ ಗೋಲುಗಳ ಮೂಲಕ ಮೆಸ್ಸಿ, ಬಾರ್ಸಿಲೋನ ತಂಡ ಜಯದ ಮತ್ತಿನಲ್ಲಿ ಮುಳುಗುವಂತೆ ಮಾಡಿದರು. ಈ ಮೂಲಕ ಅರ್ನೆಸ್ಟೊ ವಾಲ್ವರ್ಡೆ ನೇತೃತ್ವದ ಬಾರ್ಸಿಲೋನ ತಂಡ, ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವಂತೆ ಮಾಡಿದರು. ಅಲ್ಲದೆ ಮೆಸ್ಸಿಯ ಸಹ ಆಟಗಾರರಾದ ಲೂಯಿಸ್ ಸ್ಯೂರೆಝ್ ಮತ್ತು ಒಸ್ಮಾನೆ ಡೆಂಬೆಲ್ ಅವರ ಉತ್ತಮ ಪ್ರದರ್ಶನ ಎಸ್ಪಾನಿಯೊಲ್ ತಂಡವನ್ನು ಹೀನಾಯ ಸೋಲಿನ ಅಂಚಿಗೆ ತಳ್ಳಿತು. ಪಂದ್ಯದ ನಂತರ ಮಾತನಾಡಿದ ತಂಡದ ಮ್ಯಾನೇಜರ್ ವಾಲ್ವರ್ಡೆ, ಫ್ರಿಕಿಕ್ಗಳು, ಗೋಲು ಗಳಿಸಲು ಆತ ಸೃಷ್ಟಿಸುವ ಅವಕಾಶಗಳು ಅದ್ಭುತ, ಮೆಸ್ಸಿ ಒಬ್ಬ ಅಸಾಧಾರಣ ಆಟಗಾರ ಎಂದು ಬಣ್ಣಿಸಿದರು.
Next Story