ಶ್ರೀಲಂಕಾದ ಬ್ಯಾಟಿಂಗ್ ಕೋಚ್ ಆಗಿ ಲೂಯಿಸ್
ಕೊಲಂಬೊ, ಡಿ.13: ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ ಜಾನ್ ಲೂಯಿಸ್ ಶ್ರೀಲಂಕಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ. 48ರ ಹರೆಯದ ಲೂಯಿಸ್ ಅವರು ತಿಲನ್ ಸಮರವೀರ ಅವರಿಂದ ತೆರವಾದ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಮುಂಬರುವ ನ್ಯೂಝಿಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯ ಬಳಿಕ ಲೂಯಿಸ್ ತಮ್ಮ ಹುದ್ದೆ ವಹಿಸಿಕೊಳ್ಳಲಿದ್ದಾರೆ. ಗುತ್ತಿಗೆ ಪ್ರಕಾರ ಲೂಯಿಸ್ 2019ರ ಕ್ರಿಕೆಟ್ ವಿಶ್ವಕಪ್ ತನಕ ಕೋಚ್ ಆಗಿರುತ್ತಾರೆ. ನೂತನ ಕೋಚ್ ಶ್ರೀಲಂಕಾ ಬ್ಯಾಟಿಂಗ್ಗೆ ಅಗತ್ಯವಿರುವ ಶಕ್ತಿ ನೀಡಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ನ ಆಡಳಿತಾಧಿಕಾರಿ ಅಶ್ಲೆ ಡಿ ಸಿಲ್ವಾ ಹೇಳಿದ್ದಾರೆ.
Next Story