ಕಬಡ್ಡಿ: ಬುಲ್ಸ್ ತಿವಿತಕ್ಕೆ ಟೈಟಾನ್ಸ್ ಕಂಗಾಲು
ಪಂಚಕುಲಾ, ಡಿ.18: ಇಲ್ಲಿಯ ತವು ದೇವಿಲಾಲ್ ಕ್ರೀಡಾ ಸಂಕೀರ್ಣದಲ್ಲಿ ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ತೆಲುಗು ಟೈಟಾನ್ಸ್ ತಂಡವನ್ನು 44-28ರಿಂದ ಮಣ್ಣಮುಕ್ಕಿಸಿದೆ.
ಬೆಂಗಳೂರು ಬುಲ್ಸ್ ಪರ ಪವನ್ಕುಮಾರ್ ಅತ್ಯಧಿಕ 13 ಅಂಕ ಗಳಿಸಿ ಮಿಂಚಿದರೆ , ರೋಹಿತ್ ಕುಮಾರ್ 7 ಹಾಗೂ ಅಮಿತ್ ಶೋರನ್ 5 ಅಂಕಗಳನ್ನು ಗಳಿಸಿವ ಮೂಲಕ ಪವನ್ಗೆ ಉತ್ತಮ ಸಾಥ್ ನೀಡಿದರು.
ಪರಾಜಿತ ಟೈಟಾನ್ಸ್ ಪರ ರಾಹುಲ್ ಚೌಧರಿ ಅತ್ಯಧಿಕ 13 ಅಂಕಗಳನ್ನು ಗಳಿಸಿದರು. ಮೊಹ್ಸೆನ್ ಮಾಗಸೌಡ್ಲೊ 5 ಅಂಕ ಗಳಿಸಿ ಉತ್ತಮ ಪ್ರದರ್ಶನ ತೋರಿದರು.
►ಪಿಂಕ್ ಪ್ಯಾಂಥರ್ಸ್ ಪರಾಕ್ರಮ: ಇದೇ ಮೈದಾನದಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಹರ್ಯಾಣ ಸ್ಟೀಲರ್ಸ್ ತಂಡವನ್ನು ಮಣಿಸಿತು. ಪ್ಯಾಂಥರ್ಸ್ ಪರ ದೀಪಕ್ ಹೂಡ ಅತ್ಯಧಿಕ 12 ಅಂಕ ಗಳಿಸಿದರೆ, ಸೋತ ಹರ್ಯಾಣ ಪರ ವಿಕಾಸ್ ಖಂಡೋಲಾ ಅತ್ಯಧಿಕ 7 ಅಂಕಗಳನ್ನು ತಮ್ಮ ಮಡಿಲಿಗೆ ಹಾಕಿಕೊಂಡರು.
Next Story