ದಿಲ್ಲಿಗೆ ಮಣಿದ ಬೆಂಗಾಲ್ ವಾರಿಯರ್ಸ್
ಪ್ರೊ ಕಬಡ್ಡಿ: ಮೆರಾಜ್ ಮಿಂಚಿನಾಟ
ಕೋಲ್ಕತಾ, ಡಿ.23: ಇರಾನ್ ಮೂಲದ ಆಟಗಾರ ಮೆರಾಜ್ ಶೇಖ್ ಅವರ ಅಮೋಘ ಪ್ರದರ್ಶನದ ನೆರವಿನಿಂದ ಪ್ರೊ ಕಬಡ್ಡಿ ಪಂದ್ಯದಲ್ಲಿ ದಬಾಂಗ್ ದಿಲ್ಲಿ ತಂಡವು ಬೆಂಗಾಲ್ ವಾರಿಯರ್ಸ್ನ್ನು 37-31 ಅಂಕಗಳ ಅಂತರದಿಂದ ಮಣಿಸಿದೆ. ಇತ್ತಂಡಗಳೂ ಈಗಾಗಲೇ ಪ್ಲೇ ಆಫ್ನಲ್ಲಿ ಸ್ಥಾನ ಭದ್ರಪಡಿಸಿಕೊಂಡಿವೆ. ಇಲ್ಲಿಯ ನೇತಾಜಿ ಸುಭಾಶ್ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ರವಿವಾರ ನಡೆದ ಪಂದ್ಯದಲ್ಲಿ ವಿಜೇತ ದಬಾಂಗ್ ಪರ ಮೆರಾಜ್ ಶೇಖ್ ಕೊನೆಯ ರೇಡ್ನಲ್ಲಿ ತೋರಿದ ಚಮತ್ಕಾರದಿಂದ ದಿಲ್ಲಿ ರೋಚಕ ಜಯ ಸಾಧಿಸಿತು. ಮೆರಾಜ್ ಅತ್ಯಧಿಕ 13 ಅಂಕಗಳನ್ನು ಗಳಿಸಿದರೆ, ನವೀನ್ ಕುಮಾರ್ 6 ಹಾಗೂ ಚಂದ್ರನ್ ರಂಜಿತ್ 4 ಅಂಕಗಳ ಕೊಡುಗೆ ನೀಡಿದರು.
ಪರಾಜಿತ ವಾರಿಯರ್ಸ್ನ ಮಣಿಂದರ್ ಸಿಂಗ್ ಅತ್ಯಧಿಕ 9, ಭೂಪೇಂದರ್ಸಿಂಗ್ 5 ಹಾಗೂ ಲೀ ಜಾಂಗ್ ಕುನ್ 4 ಅಂಕ ಗಳಿಸಿದರು.
Next Story