ಯುಪಿಗೆ ಜಯ: ಮುಂಬಾ ಹೊರಕ್ಕೆ
ಪ್ರೊ ಕಬಡ್ಡಿ
ಕೊಚ್ಚಿ, ಡಿ.30: ಎಲ್ಲ ಹಂತದಲ್ಲೂ ಉತ್ತಮ ಪ್ರದರ್ಶನ ನೀಡಿದ ಯುಪಿ ಯೋಧಾ ತಂಡ, ಪ್ರೊ ಕಬಡ್ಡಿ 6ನೇ ಋತುವಿನ ಮೊದಲನೇ ಎಲಿಮಿನೇಟರ್ ಪಂದ್ಯದಲ್ಲಿ ಯುಮುಂಬಾವನ್ನು 34-29 ಅಂತರದಿಂದ ಮಣಿಸಿದೆ. ಈ ಮೂಲಕ ಮುಂಬಾ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದೆ.
ಯುಪಿ ಜಯದಲ್ಲಿ ಮಿಂಚು ಹರಿಸಿದ ನಿತೇಶ್ಕುಮಾರ್ 8 ಅಂಕಗಳನ್ನು ಗಳಿಸಿದರೆ, ಪರಾಜಿತ ಮುಂಬಾ ಪರ ಸಿದ್ದಾರ್ಥ್ ದೇಸಾಯಿ ಅತ್ಯಧಿಕ 7 ಅಂಕಗಳನ್ನು ಗಳಿಸಿದರು. ಶ್ರೀಕಾಂತ್ ಜಾಧವ್ ಮತ್ತು ಪ್ರಶಾಂತ್ಕುಮಾರ್ ರೈ ಇಬ್ಬರೂ ಸೇರಿ ರೋಮಾಂಚಕ 9 ಅಂಕಗಳನ್ನು ಗಳಿಸಿ ಯುಪಿ ಗೆಲುವಿಗೆ ಕೊಡುಗೆ ನೀಡಿದರು.
ದಿಲ್ಲಿಗೆ ಜಯ: 2ನೇ ಎಲಿಮಿನೇಟರ್ ಪಂದ್ಯದಲ್ಲಿ ದಬಾಂಗ್ ದಿಲ್ಲಿ ತಂಡ, ಬೆಂಗಾಲ್ ವಾರಿಯರ್ಸ್ನ್ನು 39-28 ಅಂಕಗಳ ಅಂತರದಿಂದ ಮಣಿಸಿತು. ಪ್ರಥಮಾರ್ಧದಲ್ಲಿ ಹಿನ್ನಡೆ ಅನುಭವಿಸಿದ್ದ ದಿಲ್ಲಿ ಆನಂತರ ಪಂದ್ಯದಲ್ಲಿ ಪ್ರಾಬಲ್ಯ ಮೆರೆಯಿತು. ದಬಾಂಗ್ ಪರ ನವೀನ್ಕುಮಾರ್ ಅತ್ಯಧಿಕ 11 ಅಂಕ ಗಳಿಸಿದರೆ, ಸೋಲು ಕಂಡ ವಾರಿಯರ್ಸ್ ಪರ ಮಣಿಂದರ್ ಸಿಂಗ್ ಅತ್ಯಧಿಕ 8 ಅಂಕ ಗಳಿಸಿದರು.
Next Story