ನಾಲ್ಕನೇ ಬಾರಿ ಪ್ರಶಸ್ತಿ ಜಯಿಸಿದ ಜೊಕೊವಿಕ್
ಮುಬಾಡಾಲ ವಿಶ್ವ ಟೆನಿಸ್ ಚಾಂಪಿಯನ್ಶಿಪ್
ಅಬುಧಾಬಿ, ಡಿ.30: ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಶನಿವಾರ ನಾಲ್ಕನೇ ಬಾರಿ ಮುಬಾಡಾಲ ವರ್ಲ್ಡ್ ಟೆನಿಸ್ ಚಾಂಪಿಯನ್ಶಿಪ್ನ್ನು ಗೆದ್ದುಕೊಂಡಿದ್ದಾರೆ.
ಇಲ್ಲಿ ಶನಿವಾರ ನಡೆದ ಪುರುಷರ ಸಿಂಗಲ್ಸ್ನ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಜೊಕೊವಿಕ್ ದಕ್ಷಿಣ ಆಫ್ರಿಕದ ಕೆವಿನ್ ಆ್ಯಂಡರ್ಸನ್ರನ್ನು 4-6, 7-5, 7-5 ಸೆಟ್ಗಳ ಅಂತರದಿಂದ ಮಣಿಸಿದರು.
ವಿಂಬಲ್ಡನ್ ಹಾಗೂ ಯುಎಸ್ ಓಪನ್ ಚಾಂಪಿಯನ್ ಜೊಕೊವಿಕ್ ಸೋಮವಾರ ಆರಂಭವಾಗಲಿರುವ ಕತರ್ ಓಪನ್ನಲ್ಲಿ ಭಾಗವಹಿಸಲು ನೆರೆಯ ದೋಹಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
Next Story