ತೆಂಡುಲ್ಕರ್ರ ಮತ್ತೊಂದು ದಾಖಲೆ ಪುಡಿಗಟ್ಟಿದ ಕೊಹ್ಲಿ
ಸಿಡ್ನಿ, ಜ.3: ಅತ್ಯಂತ ವೇಗವಾಗಿ ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 19,000 ರನ್ ಪೂರೈಸಿದ ಭಾರತದ ನಾಯಕ ವಿರಾಟ್ ಕೊಹ್ಲಿ ಅವರು ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್ರ ಮತ್ತೊಂದು ದಾಖಲೆಯನ್ನು ಮುರಿದರು.
ಕೊಹ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಗುರುವಾರ ಆರಂಭವಾದ ಆಸ್ಟ್ರೇಲಿಯ ವಿರುದ್ಧದ 4ನೇ ಟೆಸ್ಟ್ನಲ್ಲಿ ತನ್ನ 399ನೇ ಇನಿಂಗ್ಸ್ನಲ್ಲಿ ಈ ಸಾಧನೆ ಮಾಡಿದರು. ಸಚಿನ್ 19,000 ಅಂತರ್ರಾಷ್ಟ್ರೀಯ ರನ್ ಪೂರೈಸಲು 432 ಇನಿಂಗ್ಸ್ ತೆಗೆದುಕೊಂಡಿದ್ದರು.
ಕೊಹ್ಲಿ ಕಳೆದ ವರ್ಷದ ಸೆಪ್ಟಂಬರ್ನಲ್ಲಿ 18,000 ಅಂತರ್ರಾಷ್ಟ್ರೀಯ ರನ್ ಅತ್ಯಂತ ವೇಗವಾಗಿ (382 ಇನಿಂಗ್ಸ್)ಪೂರೈಸಿದ ಸಾಧನೆ ಮಾಡಿದ್ದರು.
Next Story