ಲಿಯೊನೆಲ್ ಮೆಸ್ಸಿ ದಾಖಲೆ ಹಿಂದಿಕ್ಕಿದ ಭಾರತದ ಸುನೀಲ್ ಚೆಟ್ರಿ
ಅಬುಧಾಬಿ, ಜ.6: ‘ಭಾರತೀಯ ಫುಟ್ಬಾಲ್ ಗೋಲ್ ಮೆಶಿನ್’ ಖ್ಯಾತಿಯ ಚೆಟ್ರಿ ತಾನಾಡಿದ ಎರಡನೇ ಏಶ್ಯಕಪ್ನಲ್ಲಿ, ವೃತ್ತಿಜೀವನದ 105ನೇ ಪಂದ್ಯದಲ್ಲಿ 67ನೇ ಗೋಲು ಬಾರಿಸಿದರು.
ಈ ಮೂಲಕ ಸಕ್ರಿಯ ಆಟಗಾರರ ಪೈಕಿ ಎರಡನೇ ಗರಿಷ್ಠ ಅಂತರ್ ರಾಷ್ಟ್ರೀಯ ಗೋಲ್ ಸ್ಕೋರರ್ ಎಂಬ ಸಾಧನೆ ಮಾಡಿದರು. ಥಾಯ್ಲೆಂಡ್ ವಿರುದ್ಧ 27ನೇ ಹಾಗೂ 46ನೇ ನಿಮಿಷದಲ್ಲಿ ಅವಳಿ ಗೋಲು ಗಳಿಸಿದ 34ರ ಹರೆಯದ ಚೆಟ್ರಿ ಅರ್ಜೆಂಟೀನದ ಸೂಪರ್ಸ್ಟಾರ್ ಲಿಯೊನೆಲ್ ಮೆಸ್ಸಿಯ ಗೋಲು ದಾಖಲೆಯನ್ನು ಹಿಂದಿಕ್ಕಿದರು. ಮೆಸ್ಸಿ ಈ ತನಕ 128 ಪಂದ್ಯಗಳಲ್ಲಿ 65 ಗೋಲು ಗಳಿಸಿದ್ದಾರೆ.
ಪೋರ್ಚುಗಲ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ 154 ಪಂದ್ಯಗಳಲ್ಲಿ 85 ಗೋಲು ಗಳಿಸಿದ್ದು, ಗರಿಷ್ಠ ಅಂತರ್ರಾಷ್ಟ್ರೀಯ ಗೋಲು ಗಳಿಸಿರುವ ವಿಶ್ವದ ಸಕ್ರಿಯ ಫುಟ್ಬಾಲ್ ಆಟಗಾರರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
Next Story