ಸಿಡ್ನಿ ಕ್ರಿಕೆಟ್ ಮೆದಾನದ ಗೌರವ ಸದಸ್ಯತ್ವ ಸ್ವೀಕರಿಸಿದ ವಿರಾಟ್ ಕೊಹ್ಲಿ, ರವಿ ಶಾಸ್ತ್ರಿ
ಸಿಡ್ನಿ, ಜ.11: ಭಾರತ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಹಾಗೂ ಪ್ರಧಾನ ಕೋಚ್ ರವಿ ಶಾಸ್ತ್ರಿ ಶುಕ್ರವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್ನ (ಎಸ್ಸಿಜಿ) ಗೌರವ ಸದಸ್ಯತ್ವ ಸ್ವೀಕರಿಸಿದರು.
ಭಾರತ ಟೆಸ್ಟ್ ಸರಣಿಯ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ 622 ರನ್ ಗಳಿಸಿತ್ತು. ಈ ಪಂದ್ಯ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲೇ ನಡೆದಿತ್ತು. ಇದು ಸಿಡ್ನಿ ಸ್ಟೇಡಿಯಂನಲ್ಲಿ ಭಾರತ ದಾಖಲಿಸಿದ್ದ 2ನೇ ಗರಿಷ್ಠ ಸ್ಕೋರಾಗಿತ್ತು. ಈ ಪಂದ್ಯ ಮಳೆಗಾಹುತಿಯಾಗಿದ್ದು, ಭಾರತ 2-1 ಅಂತರದಿಂದ ಸರಣಿ ಜಯಿಸಿತ್ತು. ಆಸ್ಟ್ರೇಲಿಯ ನೆಲದಲ್ಲಿ ಭಾರತ ಮೊದಲ ಬಾರಿ ಟೆಸ್ಟ್ ಸರಣಿ ಜಯಿಸಿ ಇತಿಹಾಸ ನಿರ್ಮಿಸಿತ್ತು.
‘‘ಆಸ್ಟ್ರೇಲಿಯ ನೆಲದಲ್ಲಿ ಮೊತ್ತ ಮೊದಲ ಟೆಸ್ಟ್ ಸರಣಿ ಜಯಿಸಿರುವ ಟೀಮ್ ಇಂಡಿಯಾಕ್ಕೆ ಎಸ್ಸಿಜಿ ಅಭಿನಂದನೆ ಸಲ್ಲಿಸುತ್ತಿದೆ. ವಿಶ್ವದ ದೈತ್ಯ ಕ್ರಿಕೆಟ್ ದೇಶವೊಂದು ಟೆಸ್ಟ್ ಕ್ರಿಕೆಟ್ನಲ್ಲಿ ಹೆಚ್ಚು ಗಮನ ನೀಡುತ್ತಿರುವುದನ್ನು ನೋಡುವುದೇ ಅದ್ಭುತ. ಈ ಹೆಜ್ಜೆ ಜಾಗತಿಕ ಕ್ರಿಕೆಟ್ ಲೋಕದಲ್ಲಿ ಕ್ರಿಕೆಟ್ ಪೂರ್ವ ಶ್ರೇಷ್ಠತೆಯನ್ನು ಬಲಪಡಿಸುತ್ತದೆ’’ ಎಂದು ಎಸ್ಸಿಜಿ ಮುಖ್ಯಸ್ಥ ಟೋನಿ ಶೆಫರ್ಡ್ ತನ್ನ ಅಧಿಕೃತ ವೆಬ್ಸೈಟ್ಗೆ ತಿಳಿಸಿದ್ದಾರೆ. ಕೊಹ್ಲಿ ಹಾಗೂ ಶಾಸ್ತ್ರಿ ಅಲ್ಲದೆ ಎಸ್ಸಿಜಿ ಗೌರವ ಸದಸ್ಯತ್ವ ಪಡೆದ ಇತರ ಅಂತರ್ರಾಷ್ಟ್ರೀಯ ಕ್ರಿಕೆಟಿಗರೆಂದರೆ: ವಿಶ್ವದ ಕ್ರಿಕೆಟ್ ಐಕಾನ್ ಸಚಿನ್ ತೆಂಡುಲ್ಕರ್ ಹಾಗೂ ವೆಸ್ಟ್ ಇಂಡೀಸ್ ಬ್ಯಾಟಿಂಗ್ ದಂತಕತೆ ಬ್ರಿಯಾನ್ ಲಾರಾ.