ಎರಡು ವರ್ಷಗಳ ಬಳಿಕ ವಿಂಡೀಸ್ ತಂಡಕ್ಕೆ ಡರೆನ್ ಬ್ರಾವೊ ವಾಪಸ್
ಬಾರ್ಬಡೊಸ್, ಜ.16: ಡರೆನ್ ಬ್ರಾವೊ ಎರಡು ವರ್ಷಗಳ ಬಳಿಕ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. 29ರ ಹರೆಯದ ಬ್ರಾವೊ ಮುಂದಿನ ವಾರ ಇಂಗ್ಲೆಂಡ್ ವಿರುದ್ಧ ಬಾರ್ಬಡೊಸ್ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ.
ಬ್ರಾವೊ 2016ರಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಪಂದ್ಯ ಆಡಿದ್ದರು. ಆಗ ಅವರು ಎರಡು ಇನಿಂಗ್ಸ್ಗಳಲ್ಲಿ 11 ಹಾಗೂ 3 ರನ್ ಗಳಿಸಿದ್ದರು.
2010ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಕಾಲಿಟ್ಟ ಬಳಿಕ ಬ್ರಾವೊ 49 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 40ರ ಸರಾಸರಿಯಲ್ಲಿ 3,400 ರನ್ ಗಳಿಸಿದ್ದಾರೆ.
ವೆಸ್ಟ್ಇಂಡೀಸ್ ತಂಡ: ಜೇಸನ್ ಹೋಲ್ಡರ್(ನಾಯಕ), ಕ್ರೆಗ್ ಬ್ರಾತ್ವೇಟ್, ಡರೆನ್ ಬ್ರಾವೊ, ಶಮ್ರಾ ಬ್ರೂಕ್ಸ್, ಜಾನ್ ಕ್ಯಾಂಪ್ಬೆಲ್, ರಾಯ್ಸ್ಟನ್ ಚೇಸ್, ಶೇನ್ ಡೌರಿಚ್, ಶಾನನ್ ಗ್ಯಾಬ್ರಿಯೆಲ್, ಶಿಮ್ರಿನ್ ಹೆಟ್ಮೆಯರ್, ಶೈ ಹೋಪ್, ಅಲ್ಝಾರಿ ಜೋಸೆಫ್, ಕೇಮರ್ ರೋಚ್, ಜೊಮೆಲ್ ವಾರ್ರಿಕನ್, ಒಶಾನೆ ಥಾಮಸ್.
Next Story