ದಕ್ಷಿಣ ಆಫ್ರಿಕ ವಿರುದ್ಧ ಪಾಕಿಸ್ತಾನ ಜಯಭೇರಿ
ಇಮಾಮ್, ಹಫೀಝ್ ಅರ್ಧಶತಕ: ಅಮ್ಲ ಶತಕ ವ್ಯರ್ಥ
ಮೊದಲ ಏಕದಿನ
ಪೋರ್ಟ್ ಎಲಿಝಬೆತ್, ಜ.20: ಇಮಾಮ್ವುಲ್ ಹಕ್ ಹಾಗೂ ಮುಹಮ್ಮದ್ ಹಫೀಝ್ ಅವರ ಅರ್ಧಶತಕಗಳ ಕೊಡುಗೆ ನೆರವಿನಿಂದ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕ ವಿರುದ್ಧ ಶನಿವಾರ ನಡೆದ ಮೊದಲ ಅಂತರ್ರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಐದು ವಿಕೆಟ್ಗಳ ಜಯ ದಾಖಲಿಸಿದೆ. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಇಲ್ಲಿನ ಸೈಂಟ್ ಜಾರ್ಜ್ ಪಾರ್ಕ್ನಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 267 ರನ್ ಗುರಿ ಪಡೆದಿದ್ದ ಪಾಕ್ ತಂಡ ಎಡಗೈ ದಾಂಡಿಗ ಇಮಾಮ್(86,101 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ಹಫೀಝ್(ಔಟಾಗದೆ 71,63 ಎಸೆತ, 8 ಬೌಂಡರಿ, 2 ಸಿಕ್ಸರ್)ಸಾಹಸದ ನೆರವಿನಿಂದ ಇನ್ನೂ 5 ಎಸೆತಗಳು ಬಾಕಿ ಇರುವಾಗಲೇ 5 ವಿಕೆಟ್ ನಷ್ಟದಲ್ಲಿ ಗೆಲುವಿನ ದಡ ಸೇರಿತು.
ಇದಕ್ಕೆ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿದ್ದ ದಕ್ಷಿಣ ಆಫ್ರಿಕ ಹಾಶಿಮ್ ಅಮ್ಲ ಸಿಡಿಸಿದ 27ನೇ ಶತಕ (ಔಟಾಗದೆ 108, 120 ಎಸೆತ, 7 ಬೌಂಡರಿ,1 ಸಿಕ್ಸರ್)ಹಾಗೂ ಡುಸ್ಸಾನ್ ಅರ್ಧಶತಕ(93, 101 ಎಸೆತ, 6 ಬೌಂಡರಿ, 3 ಸಿಕ್ಸರ್)ಸಹಾಯದಿಂದ ಕೇವಲ 2 ವಿಕೆಟ್ ಕಳೆದುಕೊಂಡು 266 ರನ್ ಕಲೆ ಹಾಕಿತು. ಅಮ್ಲ ಹಾಗೂ ರೀಝಾ ಹೆಂಡ್ರಿಕ್ಸ್(45) ಮೊದಲ ವಿಕೆಟ್ಗೆ 82 ರನ್ ಜೊತೆಯಾಟ ನಡೆಸಿ ಭದ್ರಬುನಾದಿ ಹಾಕಿಕೊಟ್ಟರು. ಡುಸ್ಸಾನ್ರೊಂದಿಗೆ 2ನೇ ವಿಕೆಟ್ಗೆ 155 ರನ್ ಸೇರಿಸಿದ ಅಮ್ಲ ತಂಡದ ಮೊತ್ತವನ್ನು 260ರ ಗಡಿ ದಾಟಿಸಿದರು. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕ್ಲೀನ್ಸ್ವೀಪ್ಗೆ ಒಳಗಾದ ಬಳಿಕ ಏಕದಿನ ಸರಣಿ ಆಡಲು ಕಣಕ್ಕಿಳಿದಿದ್ದ ಪಾಕ್ ಗೆಲುವಿನ ಎಲ್ಲ ಶ್ರೇಯಸ್ಸು ಬೌಲರ್ಗಳಿಗೆ ಸಲ್ಲುತ್ತದೆ. ಪಾಕ್ ನಾಯಕ ಸರ್ಫರಾಝ್ ಅಹ್ಮದ್ ಏಳು ಮಂದಿ ಬೌಲರ್ಗಳನ್ನು ದಾಳಿಗಿಳಿಸಿ ರನ್ಗೆ ಕಡಿವಾಣ ಹಾಕಲು ಯತ್ನಿಸಿದರು. ವೇಗಿ ಹಸನ್ ಅಲಿ ಹಾಗೂ ಲೆಗ್ ಸ್ಪಿನ್ನರ್ ಶಾದಾಬ್ ಖಾನ್ ಪೂರ್ತಿ 10 ಓವರ್ಗಳ ಬೌಲಿಂಗ್ ಮಾಡಿ ಕ್ರಮವಾಗಿ 42ಕ್ಕೆ1 ಹಾಗೂ 41ಕ್ಕೆ1 ವಿಕೆಟ್ ಪಡೆದರು. ಮತ್ತೊಂದೆಡೆ, ಗೆಲ್ಲಲು ಸ್ಪರ್ಧಾತ್ಮಕ ಸವಾಲು ಪಡೆದಿದ್ದ ಪಾಕ್ ವಿರುದ್ಧ ದಕ್ಷಿಣ ಆಫ್ರಿಕದ ಸ್ಟ್ರೈಕ್ ಬೌಲರ್ಗಳಾದ ಕಾಗಿಸೊ ರಬಾಡ ಹಾಗೂ ಡಯಾನ್ ಒಲಿವಿಯೆರ್ 19.1 ಓವರ್ಗಳಲ್ಲಿ ಒಟ್ಟು 124 ರನ್ ಬಿಟ್ಟುಕೊಟ್ಟರು. 50 ಎಸೆತಗಳಲ್ಲಿ 45 ರನ್ ಸೇರಿಸಿದ ಇಮಾಮ್ ಹಾಗೂ ಫಾಕರ್ ಝಮಾನ್(25) ಪಾಕ್ಗೆ ಉತ್ತಮ ಆರಂಭ ನೀಡಿದರು. ಇಮಾಮ್ ಹಾಗೂ ಬಾಬರ್ ಆಝಂ(49) ಎರಡನೇ ವಿಕೆಟ್ಗೆ 94 ರನ್ ಜೊತೆಯಾಟ ನಡೆಸಿ ತಂಡದ ಚೇಸಿಂಗ್ಗೆ ಬಲ ನೀಡಿದರು. ಇದಕ್ಕೆ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿದ್ದ ದಕ್ಷಿಣ ಆಫ್ರಿಕ ಹಾಶಿಮ್ ಅಮ್ಲ ಸಿಡಿಸಿದ 27ನೇ ಶತಕ (ಔಟಾಗದೆ 108, 120 ಎಸೆತ, 7 ಬೌಂಡರಿ,1 ಸಿಕ್ಸರ್)ಹಾಗೂ ಡುಸ್ಸಾನ್ ಅರ್ಧಶತಕ(93, 101 ಎಸೆತ, 6 ಬೌಂಡರಿ, 3 ಸಿಕ್ಸರ್)ಸಹಾಯದಿಂದ ಕೇವಲ 2 ವಿಕೆಟ್ ಕಳೆದುಕೊಂಡು 266 ರನ್ ಕಲೆ ಹಾಕಿತು. ಅಮ್ಲ ಹಾಗೂ ರೀಝಾ ಹೆಂಡ್ರಿಕ್ಸ್(45) ಮೊದಲ ವಿಕೆಟ್ಗೆ 82 ರನ್ ಜೊತೆಯಾಟ ನಡೆಸಿ ಭದ್ರಬುನಾದಿ ಹಾಕಿಕೊಟ್ಟರು. ಡುಸ್ಸಾನ್ರೊಂದಿಗೆ 2ನೇ ವಿಕೆಟ್ಗೆ 155 ರನ್ ಸೇರಿಸಿದ ಅಮ್ಲ ತಂಡದ ಮೊತ್ತವನ್ನು 260ರ ಗಡಿ ದಾಟಿಸಿದರು. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕ್ಲೀನ್ಸ್ವೀಪ್ಗೆ ಒಳಗಾದ ಬಳಿಕ ಏಕದಿನ ಸರಣಿ ಆಡಲು ಕಣಕ್ಕಿಳಿದಿದ್ದ ಪಾಕ್ ಗೆಲುವಿನ ಎಲ್ಲ ಶ್ರೇಯಸ್ಸು ಬೌಲರ್ಗಳಿಗೆ ಸಲ್ಲುತ್ತದೆ. ಪಾಕ್ ನಾಯಕ ಸರ್ಫರಾಝ್ ಅಹ್ಮದ್ ಏಳು ಮಂದಿ ಬೌಲರ್ಗಳನ್ನು ದಾಳಿಗಿಳಿಸಿ ರನ್ಗೆ ಕಡಿವಾಣ ಹಾಕಲು ಯತ್ನಿಸಿದರು. ವೇಗಿ ಹಸನ್ ಅಲಿ ಹಾಗೂ ಲೆಗ್ ಸ್ಪಿನ್ನರ್ ಶಾದಾಬ್ ಖಾನ್ ಪೂರ್ತಿ 10 ಓವರ್ಗಳ ಬೌಲಿಂಗ್ ಮಾಡಿ ಕ್ರಮವಾಗಿ 42ಕ್ಕೆ1 ಹಾಗೂ 41ಕ್ಕೆ1 ವಿಕೆಟ್ ಪಡೆದರು. ಮತ್ತೊಂದೆಡೆ, ಗೆಲ್ಲಲು ಸ್ಪರ್ಧಾತ್ಮಕ ಸವಾಲು ಪಡೆದಿದ್ದ ಪಾಕ್ ವಿರುದ್ಧ ದಕ್ಷಿಣ ಆಫ್ರಿಕದ ಸ್ಟ್ರೈಕ್ ಬೌಲರ್ಗಳಾದ ಕಾಗಿಸೊ ರಬಾಡ ಹಾಗೂ ಡಯಾನ್ ಒಲಿವಿಯೆರ್ 19.1 ಓವರ್ಗಳಲ್ಲಿ ಒಟ್ಟು 124 ರನ್ ಬಿಟ್ಟುಕೊಟ್ಟರು. 50 ಎಸೆತಗಳಲ್ಲಿ 45 ರನ್ ಸೇರಿಸಿದ ಇಮಾಮ್ ಹಾಗೂ ಫಾಕರ್ ಝಮಾನ್(25) ಪಾಕ್ಗೆ ಉತ್ತಮ ಆರಂಭ ನೀಡಿದರು. ಇಮಾಮ್ ಹಾಗೂ ಬಾಬರ್ ಆಝಂ(49) ಎರಡನೇ ವಿಕೆಟ್ಗೆ 94 ರನ್ ಜೊತೆಯಾಟ ನಡೆಸಿ ತಂಡದ ಚೇಸಿಂಗ್ಗೆ ಬಲ ನೀಡಿದರು.