ಕ್ರಿಕೆಟ್ ಸರಣಿಯನ್ನಾಡಲು ನ್ಯೂಝಿಲೆಂಡ್ ತಲುಪಿದ ಭಾರತ
ಆಕ್ಲಂಡ್, ಜ.20: ನ್ಯೂಝಿಲೆಂಡ್ ವಿರುದ್ಧ ಜ.23 ರಿಂದ ಆರಂಭವಾಗಲಿರುವ ಸೀಮಿತ ಓವರ್ಗಳ ಕ್ರಿಕೆಟ್ ಸರಣಿಯಲ್ಲಿ ಭಾಗವಹಿಸಲು ಭಾರತೀಯ ಕ್ರಿಕೆಟ್ ತಂಡ ರವಿವಾರ ಆಕ್ಲಂಡ್ಗೆ ಆಗಮಿಸಿದೆ.
ಮೂರು ವಾರಗಳ ಕಾಲ ನ್ಯೂಝಿಲೆಂಡ್ನಲ್ಲಿ ನೆಲೆಸಲಿರುವ ಭಾರತ ಕ್ರಿಕೆಟ್ ತಂಡ ಈ ವೇಳೆ 5 ಪಂದ್ಯಗಳ ಏಕದಿನ ಹಾಗೂ 3 ಪಂದ್ಯಗಳ ಟಿ-20 ಅಂತರ್ರಾಷ್ಟ್ರೀಯ ಸರಣಿಯನ್ನು ಆಡಲಿದೆ. ಟೀಮ್ ಇಂಡಿಯಾ ಸೋಮವಾರ ನೇಪಿಯರ್ಗೆ ನಿರ್ಗಮಿಸಲಿದೆ. ಅಲ್ಲಿ ಬುಧವಾರ ಮೊದಲ ಏಕದಿನ ಪಂದ್ಯ ನಡೆಯಲಿದೆ.
ಆ ಬಳಿಕ ಟೌರಂಗಾದಲ್ಲಿ ಜ.26 ಹಾಗೂ 28 ರಂದು ಎರಡು ಹಾಗೂ ಮೂರನೇ ಏಕದಿನ ಪಂದ್ಯ ನಡೆಯಲಿವೆ. ಹ್ಯಾಮಿಲ್ಟನ್(ಜ.31) ಹಾಗೂ ವೆಲ್ಲಿಂಗ್ಟನ್(ೆ.3)ನಲ್ಲಿ ನಾಲ್ಕನೇ ಹಾಗೂ ಐದನೇ ಪಂದ್ಯ ನಿಗದಿಯಾಗಿದೆ.
ಮೂರು ಪಂದ್ಯಗಳ ಟಿ-20 ಪಂದ್ಯಗಳು ವೆಲ್ಲಿಂಗ್ಟನ್(ೆ.6), ಆಕ್ಲಂಡ್(ೆ.8)ಹಾಗೂ ಹ್ಯಾಮಿಲ್ಟನ್(ೆ.10)ನಲ್ಲಿ ನಡೆಯಲಿವೆೆ.
ಏಕದಿನ ಪಂದ್ಯಗಳು ಭಾರತೀಯ ಕಾಲಮಾನ ಬೆಳಗ್ಗೆ 7:30ಕ್ಕೆ ಹಾಗೂ ಟಿ-20 ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 12:30ಕ್ಕೆ ಆರಂಭವಾಗಲಿವೆ.
Next Story