ವ್ಲಾಡಿಮಿರ್ ಕ್ರಾಮ್ನಿಕ್ ನಿವೃತ್ತಿ,
ಮಾಸ್ಕೊ, ಜ.29: ವಿಶ್ವದ ಚಾಣಾಕ್ಷ ಚೆಸ್ ಆಟಗಾರರರಲ್ಲಿ ಒಬ್ಬರೆನಿಸಿಕೊಂಡಿದ್ದ ರಶ್ಯದ ಗ್ರಾಂಡ್ಮಾಸ್ಟರ್ ವ್ಲಾಡಿಮಿರ್ ಕ್ರಾಮ್ನಿಕ್ ಮಂಗಳವಾರ ವೃತ್ತಿಪರ ಚೆಸ್ಗೆ ನಿವೃತ್ತಿ ಘೋಷಿಸಿದ್ದಾರೆ. 43 ವರ್ಷ ವಯಸ್ಸಿನ ಕ್ರಾಮ್ನಿಕ್ 2000ರಲ್ಲಿ ಹಾಲಿ ವಿಶ್ವ ಚಾಂಪಿಯನ್ ಆಗಿದ್ದ ಗ್ಯಾರಿ ಕ್ಯಾಸ್ಪರೊವ್ರನ್ನು ಮಣಿಸಿ ಹೊಸ ಅಲೆ ಸೃಷ್ಟಿಸಿದ್ದರು. ಸದ್ಯ ವಿಶ್ವ ರ್ಯಾಂಕಿಂಗ್ನಲ್ಲಿ 7ನೇ ಸ್ಥಾನದಲ್ಲಿರುವ ಕ್ರಾಮ್ನಿಕ್, 2006ರಲ್ಲಿ ವಿವಾದ ರಹಿತ ವಿಶ್ವಚಾಂಪಿಯನ್ ಆಗಿದ್ದರು.
‘‘ನಾನು ಈಗಾಗಲೇ ವೃತ್ತಿಪರ ಚೆಸ್ ಜೀವನ ಕೊನೆಗೊಳಿಸಲು ನಿರ್ಧರಿಸಿ ಎರಡು ತಿಂಗಳಾಗಿದ್ದು, ಈಗ ನನ್ನ ಕೊನೆಯ ಟೂರ್ನಿ ಆಡುತ್ತಿದ್ದು ನಿವೃತ್ತಿಯನ್ನು ಬಹಿರಂಗವಾಗಿ ಪ್ರಕಟಿಸುವೆನು’’ ಎಂದು ರವಿವಾರ ನೆದರ್ಲೆಂಡ್ನಲ್ಲಿ ಮುಕ್ತಾಯವಾದ ಟಾಟಾ ಸ್ಟೀಲ್ ಚೆಸ್ ಟೂರ್ನಿಯ ವೆಬ್ಸೈಟ್ಗೆ ಹೇಳಿದ್ದರು. ಚೆಸ್ ಕಲಿಕಾ ಯೋಜನೆಗಳ ಕಡೆ ಗಮನಹರಿಸಲು ವೃತ್ತಿಪರ ಚೆಸ್ಗೆ ವಿದಾಯ ಹೇಳುತ್ತಿರುವುದಾಗಿ ಅವರು ತಿಳಿಸಿದ್ದಾರೆ.
Next Story