ಫ್ರಾನ್ಸ್‘ಎ’ ವಿರುದ್ಧ ಭಾರತ ‘ಎ’ಗೆ ಜಯ
ಮಹಿಳಾ ಹಾಕಿ ಪಂದ್ಯ
ಗೋರಖ್ಪುರ(ಉ.ಪ್ರ.), ಫೆ.10: ಭಾರತ ‘ಎ’ ಮಹಿಳಾ ಹಾಕಿ ತಂಡ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು ಫ್ರಾನ್ಸ್ ‘ಎ’ ತಂಡವನ್ನು 3-2 ಗೋಲುಗಳ ಅಂತರದಿಂದ ಮಣಿಸಿತು. ರವಿವಾರ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ ಭಾರತದ ಪರ ಮರಿಯಾನಾ ಕುಜುರ್(19ನೇ ನಿಮಿಷ), ಲಾಲ್ರೆಂಸಿಯಾಮಿ(30ನೇ ನಿಮಿಷ) ಹಾಗೂ ಮುಮ್ತಾಝ್ ಖಾನ್(34ನೇ ನಿಮಿಷ)ತಲಾ ಒಂದು ಗೋಲು ಬಾರಿಸಿದರು. ಫ್ರಾನ್ಸ್ಗೆ ಮಿಕಾಲೆ ಲಾಲ್ಹಾ 14ನೇ ನಿಮಿಷದಲ್ಲಿ ಮುನ್ನಡೆ ಒದಗಿಸಿಕೊಟ್ಟರು. ಪ್ರವಾಸಿ ಫ್ರಾನ್ಸ್ ತಂಡ 58ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿತು. ಆದರೆ ಆತಿಥೇಯ ತಂಡ 2ನೇ ಪಂದ್ಯವನ್ನು ಜಯಿಸಿ ಸರಣಿಯನ್ನು ಸಮಬಲಕ್ಕೆ ತಂದಿತು.
ಮೊದಲ ಪಂದ್ಯವನ್ನು ಸೋತಿದ್ದ ಭಾರತ ಎರಡನೇ ಪಂದ್ಯದಲ್ಲಿ ರೋಚಕ ಜಯ ಸಾಧಿಸಿ ತಿರುಗೇಟು ನೀಡಿದೆ. ಭಾರತ ‘ಎ’ ತಂಡ ಮಂಗಳವಾರ ಲಕ್ನೋದಲ್ಲಿ ಫ್ರಾನ್ಸ್ ‘ಎ’ ವಿರುದ್ಧ ಮೂರನೇ ಪಂದ್ಯವನ್ನು ಆಡಲಿದೆ.
Next Story