ದ.ಆಫ್ರಿಕ-ಶ್ರೀಲಂಕಾ ದ್ವಿತೀಯ ಟೆಸ್ಟ್: ವೇಗಿ ಫಿಲ್ಯಾಂಡರ್ ಹೊರಕ್ಕೆ
ಸೆಂಚೂರಿಯನ್, ಫೆ.20: ಮಂಡಿರಜ್ಜು ನೋವಿನ ತೀವ್ರತೆಯ ಕಾರಣ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ನಿಂದ ದ.ಆಫ್ರಿಕ ವೇಗಿ ವೆರ್ನಾನ್ ಫಿಲ್ಯಾಂಡರ್ ಹೊರಗುಳಿದಿದ್ದಾರೆ. ಈ ಕುರಿತು ವಿವರ ನೀಡಿರುವ ಆಫ್ರಿಕ ತಂಡದ ಕೋಚ್ ಒಟ್ಟಿಸ್ ಗಿಬ್ಸನ್, ‘‘ 10-12 ದಿನಗಳ ಕಾಲ ಫಿಲ್ಯಾಂಡರ್ ಕ್ರಿಕೆಟ್ನಿಂದ ಹೊರಗುಳಿಯಲಿದ್ದಾರೆ. ಎರಡನೇ ಹಾಗೂ ಕೊನೆಯ ಟೆಸ್ಟ್ನಲ್ಲಿ ಫಿಲ್ಯಾಂಡರ್ಸ್ಥಾನದಲ್ಲಿ ಹೊಸ ಆಟಗಾರ, ಆಲ್ರೌಂಡರ್ ವಿಯಾನ್ ಮುಲ್ಡರ್ ಅವರನ್ನು ಹೆಸರಿಸುವ ಸಾಧ್ಯತೆಯಿದೆ’’ ಎಂದು ಹೇಳಿದ್ದಾರೆ. ದ.ಆಫ್ರಿಕ ಹಾಗೂ ಲಂಕಾ ತಂಡಗಳ ಮಧ್ಯೆ ಎರಡನೇ ಹಾಗೂ ಕೊನೆಯ ಟೆಸ್ಟ್ ಫೆ.21ರಿಂದ ಸೈಂಟ್ ಜಾರ್ಜ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯಲಿದೆ.
Next Story