ಎರಡನೇ ಏಕದಿನ: ಕೊಹ್ಲಿ ಶತಕ; ಭಾರತ 250 ರನ್ಗೆ ಆಲೌಟ್
ನಾಗ್ಪುರ, ಮಾ. 5: ನಾಯಕ ವಿರಾಟ್ ಕೊಹ್ಲಿ ಅವರ ಆಕರ್ಷಕ ಶತಕದ(116, 120 ಎಸೆತ, 10 ಬೌಂಡರಿ)ಬೆಂಬಲದಿಂದ ಭಾರತ ತಂಡ ಆಸ್ಟ್ರೇಲಿಯ ವಿರುದ್ಧದ ಎರಡನೇ ಅಂತರ್ರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 48.2 ಓವರ್ಗಳಲ್ಲಿ 250 ರನ್ ಗಳಿಸಿ ಆಲೌಟಾಗಿದೆ.
ಇಲ್ಲಿನ ವಿಸಿಎ ಸ್ಟೇಡಿಯಂನಲ್ಲಿ ಮಂಗಳವಾರ ಟಾಸ್ ಜಯಿಸಿದ ಆಸ್ಟ್ರೇಲಿಯ ಮೊದಲು ಭಾರತವನ್ನು ಬ್ಯಾಟಿಂಗ್ಗೆ ಇಳಿಸಿತು.
ಆರಂಭಿಕ ಆಟಗಾರ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ಎಂಎಸ್ ಧೋನಿ ಶೂನ್ಯಕ್ಕೆ ಔಟಾಗಿ ಭಾರೀ ನಿರಾಸೆಗೊಳಿಸಿದರು. 40ನೇ ಶತಕ ಸಿಡಿಸಿ ಏಕಾಂಗಿ ಹೋರಾಟ ನೀಡಿದ ಕೊಹ್ಲಿ ನಾಲ್ಕನೇ ವಿಕೆಟ್ಗೆ ಆಲ್ರೌಂಡರ್ ವಿಜಯ ಶಂಕರ್(46) ಅವರೊಂದಿಗೆ 87 ರನ್ ಜೊತೆಯಾಟ ನಡೆಸಿದರೆ, ಇನ್ನೋರ್ವ ಆಲ್ರೌಂಡರ್ ರವೀಂದ್ರ ಜಡೇಜ(21) ಅವರೊಂದಿಗೆ ಕೆಳ ಕ್ರಮಾಂಕದಲ್ಲಿ 7ನೇ ವಿಕೆಟ್ಗೆ 67 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.
ಆಸೀಸ್ ಪರ ವೇಗದ ಬೌಲರ್ ಕಮಿನ್ಸ್(4-26)ಯಶಸ್ವಿ ಬೌಲರ್ ಎನಿಸಿಕೊಂಡರು. ಸ್ಪಿನ್ನರ್ ಆ್ಯಡಮ್ ಝಾಂಪ(2-62)ಎರಡು ವಿಕೆಟ್ ಪಡೆದರು.
Next Story