ಸಿಂಗಾಪುರ ಓಪನ್: ಸೈನಾ ನೆಹ್ವಾಲ್ ಹೊರಕ್ಕೆ
ಸಿಂಗಾಪುರ, ಎ.12: ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ನ ಮಹಿಳೆಯರ ಕ್ವಾರ್ಟರ್ ಫೈನಲ್ ನಲ್ಲಿ ಶುಕ್ರವಾರ ಭಾರತದ ಮಹಿಳಾ ತಾರೆ ಸೈನಾ ನೆಹ್ವಾಲ್ ಸೋತು ನಿರ್ಗಮಿಸಿದ್ದಾರೆ.
ಸೈನಾ ನೆಹ್ವಾಲ್ ಅವರು ಜಪಾನ್ ನ ನಂ.3 ನೊಝೊಮಿ ಒಕುಹರಾ ವಿರುದ್ಧ 8-21, 13-21 ಅಂತರದಲ್ಲಿ ಸೋತು ಹೊರ ನಡೆಯುವ ಮೂಲಕ ಪ್ರಶಸ್ತಿಯ ಗೆಲ್ಲುವ ಅಭಿಯಾನವನ್ನು ಅರ್ಧದಲ್ಲೇ ಕೊನೆಗೊಳಿಸಿದರು.
Next Story