ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ: ಹಾರ್ದಿಕ್ ಪಾಂಡ್ಯ, ಕೆ.ಎಲ್.ರಾಹುಲ್ಗೆ ತಲಾ 20 ಲಕ್ಷ ರೂ. ದಂಡ
ಹೊಸದಿಲ್ಲಿ, ಎ.20: ‘ಕಾಫಿ ವಿತ್ ಕರಣ್’ ಎಂಬ ಟಿವಿ ಕಾರ್ಯಕ್ರಮದಲ್ಲಿ ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್.ರಾಹುಲ್ಗೆ ಬಿಸಿಸಿಐ ಒಂಬುಡ್ಸ್ಮನ್ ತಲಾ 20 ಲಕ್ಷ ರೂ. ದಂಡ ವಿಧಿಸಿದ್ದಾರೆ.
ಪತ್ರಿಕಾಪ್ರಕಟನೆ ಬಿಡುಗಡೆ ಮಾಡಿರುವ ಒಂಬುಡ್ಸ್ಮನ್,‘‘ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡಿರುವ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್.ರಾಹುಲ್ಗೆ ತಲಾ 20 ಲಕ್ಷ ರೂ. ದಂಡ ವಿಧಸಲಾಗಿದೆ. ಭಾರತ್ ಕೆ ವೀರ್ ಆ್ಯಪ್ ಮೂಲಕ 10 ಕಂತುಗಳಲ್ಲಿ 1 ಲಕ್ಷ ರೂ. ಹಾಗೂ ಉಳಿದ 10 ಲಕ್ಷ ರೂ.ವನ್ನು ಅಂಧರ ಕ್ರಿಕೆಟ್ ಸಂಸ್ಥೆಗೆ ನೀಡಬೇಕಾಗಿದೆ’’ ಎಂದಿದೆ.
ಕ್ರಿಕೆಟಿಗರು ನಾಲ್ಕು ವಾರಗಳಲ್ಲಿ ದಂಡ ಪಾವತಿಸಬೇಕೆಂದು ನಿರ್ದೇಶಿಸಲಾಗಿದೆ.
Next Story