ಪಂಜಾಬ್ ನಾಯಕ ಅಶ್ವಿನ್ಗೆ ದಂಡ
ನಿಧಾನಗತಿಯ ಬೌಲಿಂಗ್
ಹೊಸದಿಲ್ಲಿ, ಎ.21: ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಶನಿವಾರ ಇಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ನಿರ್ವಹಿಸಿದ ತಪ್ಪಿಗೆ ಕಿಂಗ್ಸ್ ಇಲೆವನ್ ಪಂಜಾಬ್ ನಾಯಕ ಆರ್.ಅಶ್ವಿನ್ಗೆ ದಂಡ ವಿಧಿಸಲಾಗಿದೆ. ಕನಿಷ್ಠ ಓವರ್ ಗತಿ ಉಲ್ಲಂಘಿಸಿದ ನಿಯಮದಡಿ ಪಂಜಾಬ್ ಈ ಆವೃತ್ತಿಯಲ್ಲಿ ಮೊದಲ ಬಾರಿ ಶಿಕ್ಷೆಗೆ ಒಳಗಾಗಿದ್ದು, ಅಶ್ವಿನ್ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಫಿರೋಝ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ವಿರುದ್ಧ ಪಂಜಾಬ್ 5 ವಿಕೆಟ್ಗಳ ಸೋಲು ಅನುಭವಿಸಿತ್ತು. ಈ ಆವೃತ್ತಿಯಲ್ಲಿ ಆ ತಂಡದ 5ನೇ ಸೋಲು ಇದಾಗಿತ್ತು.
Next Story