ಇಂಗ್ಲೆಂಡ್ ಸರಣಿಗೆ ಶಾದಾಬ್ ಅಲಭ್ಯ
ಲಾಹೋರ್, ಎ.21: ಪಾಕಿಸ್ತಾನದ ಉದಯೋನ್ಮುಖ ಲೆಗ್ಸ್ಪಿನ್ನರ್ ಶಾದಾಬ್ ಖಾನ್ ಅನಾರೋಗ್ಯದ ಕಾರಣ ಮುಂದಿನ ತಿಂಗಳು ನಡೆಯುವ ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ. ಇದರೊಂದಿಗೆ ಅವರ ವಿಶ್ವಕಪ್ ಲಭ್ಯತೆಯೂ ಅನುಮಾನವಾಗಿದೆ.
ಇಂಗ್ಲೆಂಡ್ನಲ್ಲಿ ಮೇ 30ರಂದು ಆರಂಭವಾಗುವ ಏಕದಿನ ವಿಶ್ವಕಪ್ಗೆ 20 ವರ್ಷದ ಶಾದಾಬ್ ಪಾಕಿಸ್ತಾನ ತಂಡದ ಪ್ರಮುಖ ಬೌಲರ್ ಎನಿಸಿದ್ದಾರೆ.
ಮಂಗಳವಾರ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲಿರುವ ಪಾಕ್ ತಂಡ, ನಂ.1 ರ್ಯಾಂಕ್ನಲ್ಲಿರುವ ಇಂಗ್ಲೆಂಡ್ ತಂಡದ ವಿರುದ್ಧ ಮೇ 5ರಿಂದ 5 ಏಕದಿನ ಪಂದ್ಯಗಳನ್ನು ಆಡಲಿದೆ.
Next Story