ಮುಂಬೈ ಇಂಡಿಯನ್ಸ್ ತಂಡಕ್ಕೆ ಹೆಂಡ್ರಿಕ್ಸ್
ಹೊಸದಿಲ್ಲಿ, ಎ.23: ಗಾಯಗೊಂಡಿರುವ ಅಲ್ಝಾರಿ ಜೋಸೆಫ್ ಬದಲಿಗೆ ಐಪಿಎಲ್ ಟ್ವೆಂಟಿ-20 ಟೂರ್ನಿಯ ಉಳಿದ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕದ ವೇಗದ ಬೌಲರ್ ಬ್ಯುರನ್ ಹೆಂಡ್ರಿಕ್ಸ್ ಆಡಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮಂಗಳವಾರ ತಿಳಿಸಿದೆ.
ನ್ಯೂಝಿಲೆಂಡ್ನ ಆ್ಯಡಮ್ ಮಿಲ್ನೆ ಬದಲಿಗೆ ಐಪಿಎಲ್ ಟೂರ್ನಿಗೆ ಆಯ್ಕೆಯಾಗಿದ್ದ ಜೋಸೆಫ್ ಎ.7 ರಂದು ನಡೆದ ತನ್ನ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 12 ರನ್ಗೆ ಆರು ವಿಕೆಟ್ಗಳನ್ನು ಕಬಳಿಸಿ ಗಮನ ಸೆಳೆದಿದ್ದರು. ಆದರೆ, 22ರ ಹರೆಯದ ವಿಂಡೀಸ್ ಆಟಗಾರ ರಾಜಸ್ಥಾನ ರಾಯಲ್ಸ್ ವಿರುದ್ಧ ಕಳೆದ ವಾರ ನಡೆದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಬಿದ್ದು ಭುಜನೋವಿಗೆ ತುತ್ತಾಗಿದ್ದರು. ಎಡಗೈ ವೇಗದ ಬೌಲರ್ ಹೆಂಡ್ರಿಕ್ಸ್ ವಿಶ್ವದ ಅತ್ಯಂತ ಜನಪ್ರಿಯ ಟ್ವೆಂಟಿ-20 ಲೀಗ್ ಐಪಿಎಲ್ನಲ್ಲಿ ಎರಡನೇ ಬಾರಿ ಭಾಗವಹಿಸಲಿದ್ದಾರೆ. ಈ ಹಿಂದೆ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದರು.
Next Story