1500 ಮೀ. ಓಟದಲ್ಲಿ ಪಿ.ಯು. ಚಿತ್ರಾಗೆ ಚಿನ್ನ
ಏಶ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್
ದೋಹಾ, ಎ.24: ಏಶ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ 4ನೇ ಹಾಗೂ ಅಂತಿಮ ದಿನವಾದ ಬುಧವಾರ 1,500 ಮೀ. ಓಟದ ಸ್ಪರ್ಧೆಯಲ್ಲಿ ಪಿ.ಯು. ಚಿತ್ರಾ ಚಿನ್ನದ ಪದಕ ಜಯಿಸಿ ಗಮನ ಸೆಳೆದಿದ್ದಾರೆ. ಚಿತ್ರಾ 4 ನಿಮಿಷ ಹಾಗೂ 14.56 ಸೆಕೆಂಡ್ನಲ್ಲಿ ಗುರಿ ತಲುಪಿ ಟೂರ್ನಿಯಲ್ಲಿ ಭಾರತಕ್ಕೆ ಮೂರನೇ ಚಿನ್ನ ಗೆದ್ದುಕೊಟ್ಟರು. ಮಾತ್ರವಲ್ಲ 2017ರಲ್ಲಿ ಭುವನೇಶ್ವರದಲ್ಲಿ ನಡೆದ ಕಳೆದ ಆವೃತ್ತಿಯ ಟೂರ್ನಿಯಲ್ಲಿ ಗೆದ್ದುಕೊಂಡಿದ್ದ ಚಿನ್ನದ ಪದಕವನ್ನು ತನ್ನಲ್ಲೇ ಉಳಿಸಿಕೊಂಡರು. ಪುರುಷರ 1,500 ಮೀ. ಓಟದಲ್ಲಿ ಅಜಯ್ಕುಮಾರ್ ಸರೋಜ್ ಬೆಳ್ಳಿ ಪದಕ ಜಯಿಸಿದರು. ಅಜಯ್ 3 ನಿಮಿಷ, 43.18 ಸೆಕೆಂಡ್ನಲ್ಲಿ ಗುರಿ ತಲುಪಿ 2ನೇ ಸ್ಥಾನ ಪಡೆದರು.
ಮಂಗಳವಾರ 2 ರಾಷ್ಟ್ರೀಯ ದಾಖಲೆ ಮುರಿದು ಮಿಂಚಿದ್ದ ಓಟಗಾರ್ತಿ ದ್ಯುತಿ ಚಂದ್ 200 ಮೀ.ಓಟದ ಫೈನಲ್ನಲ್ಲಿ 23.24 ಸೆಕೆಂಡ್ನಲ್ಲಿ ಗುರಿ ತಲುಪಿ ಕಂಚಿನ ಪದಕಕ್ಕೆ ತೃಪ್ತಿಪಟ್ಟು ನಿರಾಸೆಗೊಳಿಸಿದರು. ಮಹಿಳೆಯರ ಡಿಸ್ಕಸ್ ಎಸೆತದ ಫೈನಲ್ನಲ್ಲಿ ಕರಣ್ಜೀತ್ ಕೌರ್ ಹಾಗೂ ನವಜೀತ್ ಸಿಂಗ್ ದಿಲ್ಲೋನ್ ಕ್ರಮವಾಗಿ 4ನೇ ಹಾಗೂ 5ನೇ ಸ್ಥಾನ ಪಡೆದರು.