ಸೌರವ್, ಜೋಶ್ನಾ ಫೈನಲ್ಗೆ ಲಗ್ಗೆ
ಏಶ್ಯನ್ ಸ್ಕ್ವಾಷ್ ಚಾಂಪಿಯನ್ಶಿಪ್
ಚೆನ್ನೈ, ಮೇ 4: ಭಾರತದ ಅಗ್ರಮಾನ್ಯ ಸ್ಕ್ವಾಷ್ ಆಟಗಾರ ಸೌರವ್ ಘೋಷಾಲ್ ಹಾಗೂ ಹಾಲಿ ಚಾಂಪಿಯನ್ ಜೋಶ್ನಾ ಚಿನ್ನಪ್ಪ ಕೌಲಾಲಂಪುರದಲ್ಲಿ ಶನಿವಾರ ನಡೆದ ಏಶ್ಯನ್ ಸ್ಕ್ವಾಷ್ ಚಾಂಪಿಯನ್ಶಿಪ್ನ ಪುರುಷರ ಹಾಗೂ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಫೈನಲ್ಗೆ ತಲುಪಿದ್ದಾರೆ.
ಚೆನ್ನೈ ಆಟಗಾರ್ತಿ ಜೋಶ್ನಾ ಮಲೇಶ್ಯಾದ ಆರನೇ ಶ್ರೇಯಾಂಕದ ಸಿವಸಂಗರಿ ಸುಬ್ರಮಣ್ಯಂರನ್ನು 11-7, 12-10, 11-3 ಗೇಮ್ಗಳ ಅಂತರದಿಂದ ಮಣಿಸಿದರು. ಫೈನಲ್ನಲ್ಲಿ ಅಗ್ರ ಶ್ರೇಯಾಂಕದ ಹಾಂಕಾಂಗ್ ಆಟಗಾರ್ತಿ ಅನ್ನಿ ಅವರನ್ನು ಮುಖಾಮುಖಿಯಾಗುವರು.
ಘೋಷಾಲ್ ಮಲೇಶ್ಯಾದ ಏಳನೇ ಶ್ರೇಯಾಂಕದ ಇಐನ್ ಯೊವ್ರನ್ನು 11-2, 11-6, 11-4 ಅಂತರದಿಂದ ಸೋಲಿಸಿದರು.
32 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದುಕೊಂಡ ಘೋಷಾಲ್ ರವಿವಾರ ನಡೆಯಲಿರುವ ಫೈನಲ್ನಲ್ಲಿ ಹಾಂಕಾಂಗ್ನ 4ನೇ ಶ್ರೇಯಾಂಕದ ಲಿಯೊ ಚುನ್ ಮಿಂಗ್ರನ್ನು ಎದುರಿಸಲಿದ್ದಾರೆ.
Next Story