ಮೂರನೇ ಸ್ಥಾನಕ್ಕೆ ಫೆಡರರ್ ವಾಪಸ್
ಎಟಿಪಿ ರ್ಯಾಂಕಿಂಗ್
ಪ್ಯಾರಿಸ್, ಮೇ 6: ವಿಶ್ವದ ಮಾಜಿ ನಂ.1 ಆಟಗಾರ ರೋಜರ್ ಫೆಡರರ್ ಸೋಮವಾರ ಬಿಡುಗಡೆಯಾದ ಎಟಿಪಿ ರ್ಯಾಂಕಿಂಗ್ನಲ್ಲಿ ಮೂರನೇ ಸ್ಥಾನಕ್ಕೆ ಮರಳಿದ್ದಾರೆ. ಅಲೆಕ್ಸಾಂಡರ್ ಝ್ವೆರೆವ್ ಮ್ಯೂನಿಕ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ನಲ್ಲಿ ಸೋತು ನಿರ್ಗಮಿಸಿದ ಕಾರಣ ಮೂರನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಕುಸಿದರು. ಝ್ವೆರೆವ್ ಸ್ಥಾನ ಆಕ್ರಮಿಸಿಕೊಂಡ 20 ಬಾರಿಯ ಗ್ರಾನ್ಸ್ಲಾಮ್ ಚಾಂಪಿಯನ್ ಫೆಡರರ್ ಮೂರು ವರ್ಷಗಳ ಬಿಡುವಿನ ಬಳಿಕ ಈ ವಾರ ಮ್ಯಾಡ್ರಿಡ್ ಓಪನ್ನಲ್ಲಿ ಆಡಿದ್ದರು. ಇದೇ ವೇಳೆ, ಗ್ರೀಕ್ನ ಸ್ಟೆಫನೊಸ್ ಸಿಟ್ಸಿಪಾಸ್ 9ನೇ ಸ್ಥಾನ ಪಡೆದಿದ್ದು, 9ನೇ ಸ್ಥಾನ ಕಳೆದುಕೊಂಡಿರುವ ಅಮೆರಿಕದ ಜಾನ್ ಇಸ್ನೆರ್ 10ನೇ ಸ್ಥಾನಕ್ಕೆ ಜಾರಿದ್ದಾರೆ. ಸರ್ಬಿಯದ ನೊವಾಕ್ ಜೊಕೊವಿಕ್ ನಂ.1 ಸ್ಥಾನ ಕಾಯ್ದುಕೊಂಡಿದ್ದು, ರಫೆಲ್ ನಡಾಲ್ ಎರಡನೇ ಸ್ಥಾನದಲ್ಲಿದ್ದಾರೆ.
Next Story