ಐಪಿಎಲ್ ಕ್ವಾಲಿಫೈಯರ್-1: ಮುಂಬೈಗೆ 132 ರನ್ ಗುರಿ ನೀಡಿದ ಚೆನ್ನೈ
ಚೆನ್ನೈ, ಮೇ 7: ಅಂಬಟಿ ರಾಯುಡು ಹಾಗೂ ಎಂಎಸ್ ಧೋನಿ ಅವರ ಸಮಯೋಚಿತ ಬ್ಯಾಟಿಂಗ್ ಬೆಂಬಲದಿಂದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡಕ್ಕೆ ಐಪಿಎಲ್ನ ಮೊದಲ ಕ್ವಾಲಿಫೈಯರ್ ಪಂದ್ಯದ ಗೆಲುವಿಗೆ 132 ರನ್ ಗುರಿ ನೀಡಿದೆ.
ತವರು ಮೈದಾನ ಎಂಎ ಚಿದಂಬರಂ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ಟಾಸ್ ಜಯಿಸಿದ ಚೆನ್ನೈ ನಾಯಕ ಧೋನಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಇನಿಂಗ್ಸ್ ಆರಂಭಿಸಿದ ಎಫ್ಡು ಪ್ಲೆಸಿಸ್(8) ಹಾಗೂ ಶೇನ್ ವಾಟ್ಸನ್(10) ಉತ್ತಮ ಆರಂಭ ನೀಡಲು ವಿಫಲರಾದರು. ತಂಡದ ಸ್ಕೋರ್ 6 ರನ್ ಆಗುವಷ್ಟರಲ್ಲಿ ಪ್ಲೆಸಿಸ್ ಪೆವಿಲಿಯನ್ಗೆ ವಾಪಸಾದರು. ಹಿರಿಯ ಕ್ರಿಕೆಟಿಗ ಸುರೇಶ್ ರೈನಾ ಕೇವಲ 5 ರನ್ ಗಳಿಸಿ ಜಯಂತ್ ಯಾದವ್ಗೆ ರಿಟರ್ನ್ ಕ್ಯಾಚ್ ನೀಡಿದರು. ಇನ್ನೊರ್ವ ಆರಂಭಿಕ ಆಟಗಾರ ವಾಟ್ಸನ್ ಕೂಡ 10 ರನ್ ಗಳಿಸಲಷ್ಟೇ ಶಕ್ತರಾದರು.
ಚೆನ್ನೈ 32 ರನ್ಗೆ 3 ವಿಕೆಟ್ ಕಳೆದುಕೊಂಡಾಗ ಮುರಳಿ ವಿಜಯ್ರೊಂದಿಗೆ ಕೈಜೋಡಿಸಿದ ಅಂಬಟಿ ರಾಯುಡು 4ನೇ ವಿಕೆಟ್ಗೆ 33 ರನ್ ಸೇರಿಸಿ ತಂಡದ ಇನಿಂಗ್ಸ್ ರಿಪೇರಿ ಮಾಡಿದರು. ಈ ಜೋಡಿಯನ್ನು ರಾಹುಲ್ ಚಹಾರ್ ಬೇರ್ಪಡಿಸಿದರು.ಎಸೆತಕ್ಕೊಂದು ರನ್(26) ಗಳಿಸಿದ ವಿಜಯ್ ಅವರನ್ನು ಡಿಕಾಕ್ ಸ್ಟಂಪಿಂಗ್ ಮಾಡಿದರು.
ಆಗ ಕ್ರೀಸ್ಗಿಳಿದ ನಾಯಕ ಧೋನಿ ಸಹ ಆಟಗಾರ ರಾಯುಡುರೊಂದಿಗೆ 5ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 66 ರನ್ ಸೇರಿಸಿ ತಂಡದ ಮೊತ್ತವನ್ನು 131ಕ್ಕೆ ತಲುಪಿಸಿದರು.
ರಾಯುಡು ಔಟಾಗದೆ 42(37 ಎಸೆತ, 3 ಬೌಂಡರಿ.1 ಸಿಕ್ಸರ್) ಹಾಗೂ ಧೋನಿ ಔಟಾಗದೆ 37(29 ಎಸೆತ, 3 ಸಿಕ್ಸರ್)ಗಳಿಸಿದರು.
ಮುಂಬೈ ಪರ ರಾಹುಲ್ ಚಹಾರ್(2-14) ಯಶಸ್ವಿ ಬೌಲರ್ ಎನಿಸಿಕೊಂಡರು. ಪಾಂಡ್ಯ ಹಾಗೂ ಜಯಂತ್ ಯಾದವ್ ತಲಾ 1 ವಿಕೆಟ್ ಪಡೆದರು.
ಸ್ಕೋರ್ ವಿವರ
ಚೆನ್ನೈ ಸೂಪರ್ ಕಿಂಗ್ಸ್
20 ಓವರ್ಗಳಲ್ಲಿ 131/4
ಎಫ್ಡು ಪ್ಲೆಸಿಸ್ ಸಿ ಸಬ್ ಬಿ ಚಹಾರ್ 06
ವಾಟ್ಸನ್ ಸಿ ಯಾದವ್ ಬಿ ಕೃಣಾಲ್ ಪಾಂಡ್ಯ 10
ಸುರೇಶ್ ರೈನಾ ಸಿ ಮತ್ತು ಬಿ ಜಯಂತ್ ಯಾದವ್ 05
ಮುರಳಿ ವಿಜಯ್ ಸ್ಟಂ.ಡಿಕಾಕ್ ಬಿ ಚಹಾರ್ 26
ಅಂಬಟಿ ರಾಯುಡು ಔಟಾಗದೆ 42
ಎಂಎಸ್ ಧೋನಿ ಔಟಾಗದೆ 37
ವಿಕೆಟ್ ಪತನ: 1-6, 2-12, 3-32, 4-65
ಬೌಲಿಂಗ್ ವಿವರ
ಲಸಿತ್ ಮಾಲಿಂಗ 3-0-26-0
ಕೃಣಾಲ್ ಪಾಂಡ್ಯ 4-0-21-1
ರಾಹುಲ್ ಚಹಾರ್ 4-0-14-2
ಜಯಂತ್ ಯಾದವ್ 3-0-25-1
ಜಸ್ಪ್ರಿತ್ ಬುಮ್ರಾ 4-0-31-0
ಹಾರ್ದಿಕ್ ಪಾಂಡ್ಯ 2-0-13-0.