ಬಾರ್ಸಿಲೋನಕ್ಕೆ ಆಘಾತ, ಲಿವರ್ಪೂಲ್ ಪೈನಲ್ಗೆ
ಚಾಂಪಿಯನ್ಸ್ ಲೀಗ್
ಅನ್ಫೀಲ್ಡ್(ಲಿವರ್ಪೂಲ್), ಮೇ 8: ಮೊದಲ ಹಂತದ ಸೆಮಿ ಫೈನಲ್ ಸೋಲಿನಿಂದ ಬೇಗನೆ ಹೊರಬಂದ ಲಿವರ್ಪೂಲ್ ತಂಡ ಎರಡನೇ ಹಂತದ ಸೆಮಿ ಫೈನಲ್ನಲ್ಲಿ ಬಲಿಷ್ಠ ಬಾರ್ಸಿಲೋನವನ್ನು 4-0 ಗೋಲುಗಳ ಅಂತರದಿಂದ ಸೋಲಿಸಿ 4-3 ಗೋಲುಗಳ ಸರಾಸರಿಯೊಂದಿಗೆ ಸತತ ಎರಡನೇ ಬಾರಿ ಚಾಂಪಿಯನ್ಸ್ ಲೀಗ್ ಟೂರ್ನಿಯಲ್ಲಿ ಫೈನಲ್ಗೆಲಗ್ಗೆ ಇಟ್ಟಿದೆ.
ಇಲ್ಲಿ ಮಂಗಳವಾರ ನಡೆದ ಎರಡನೇ ಹಂತದ ಸೆಮಿ ಫೈನಲ್ನಲ್ಲಿ ಲಿವರ್ಪೂಲ್ ಪರ ಸ್ಟ್ರೈಕರ್ ಡಿವೊಕ್ ಒರಿಜಿ (7ನೇ, 79ನೇ ನಿಮಿಷ) ಹಾಗೂ ಬದಲಿ ಆಟಗಾರ ಜಾರ್ಜಿನಿ ಎಜ್ನಾಲ್ಡಮ್((54ನೇ ಹಾಗೂ 56ನೇ ನಿಮಿಷ)ತಲಾ ಎರಡು ಗೋಲುಗಳನ್ನು ಗಳಿಸಿ ಲಿವರ್ಪೂಲ್ ತಂಡ ಚಾಂಪಿಯನ್ಸ್ ಲೀಗ್ನಲ್ಲಿ 9ನೇ ಬಾರಿ ಫೈನಲ್ಗೆ ತಲುಪಲು ನೆರವಾದರು.
ಮೊದಲ ಹಂತದ ಸೆಮಿ ಫೈನಲ್ನಲ್ಲಿ ಸ್ಪೇನ್ಗೆ 0-3 ಅಂತರದಿಂದ ಸೋತಿದ್ದ ಲಿವರ್ಪೂಲ್ ಎರಡನೇ ಹಂತದ ಸೆಮಿ ಫೈನಲ್ನಲ್ಲಿ ಮುಹಮ್ಮದ್ ಸಲಾಹ್ ಹಾಗೂ ರೊಬರ್ಟೊ ಫಿರ್ಮಿನೊ ಅನುಪಸ್ಥಿತಿಯಲ್ಲೂ ಅಮೋಘ ಪ್ರತಿ ಹೋರಾಟ ನೀಡಿತು. ಒರಿಜಿ 7ನೇ ನಿಮಿಷದಲ್ಲಿ ಗೋಲು ಗಳಿಸಿ ಲಿವರ್ಪೂಲ್ಗೆ ಆರಂಭಿಕ ಮೇಲುಗೈ ಒದಗಿಸಿದರು. ಜಾರ್ಜಿನಿ 54ನೇ ಹಾಗೂ 56ನೇ ನಿಮಿಷದಲ್ಲಿ ಬೆನ್ನುಬೆನ್ನಿಗೆ ಗೋಲು ಗಳಿಸಿ ತಂಡದ ಮುನ್ನಡೆಯನ್ನು 3-0ಗೆ ಏರಿಸಿದರು. 79ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದ ಒರಿಜಿ, ಲಿವರ್ಪೂಲ್ಗೆ 4-0 ಅಂತರದ ಗೆಲುವು ತಂದರು.
ಲಿವರ್ಪೂಲ್ ಜೂನ್ 1 ರಂದು ಮ್ಯಾಡ್ರಿಡ್ನಲ್ಲಿ ನಡೆಯುವ ಫೈನಲ್ನಲ್ಲಿ ಡಚ್ನ ಅಜಾಕ್ಸ್ ಅಥವಾ ಪ್ರೀಮಿಯರ್ ಲೀಗ್ ಎದುರಾಳಿ ಟೊಟ್ಟೆನ್ಹ್ಯಾಮ್ ತಂಡವನ್ನು ಎದುರಿಸಲಿದೆ. ಆರನೇ ಬಾರಿ ಯುರೋಪಿಯನ್ ಚಾಂಪಿಯನ್ ಕಿರೀಟ ಧರಿಸುವ ಫೇವರಿಟ್ ತಂಡವಾಗಿ ಹೊರಹೊಮ್ಮಿದೆ.
2005ರಲ್ಲಿ ಇಸ್ತಾಂಬುಲ್ನಲ್ಲಿ ನಡೆದ ಎಸಿ ಮಿಲನ್ ವಿರುದ್ಧ ಚಾಂಪಿಯನ್ಸ್ ಲೀಗ್ ಫೈನಲ್ನ ಮೊದಲಾರ್ಧದಲ್ಲಿ 0-3 ಹಿನ್ನಡೆಯಿಂದ ಚೇತರಿಸಿಕೊಂಡಿದ್ದ ಲಿವರ್ಪೂಲ್ ತಂಡ 5ನೇ ಬಾರಿ ಟ್ರೋಫಿ ಗೆದ್ದುಕೊಂಡಿದ್ದು, ಇದೀಗ 14 ವರ್ಷಗಳ ಹಿಂದಿನ ಪ್ರದರ್ಶನವನ್ನು ನೆನಪಿಸಿದೆ.