ಸ್ಪರ್ಧೆಯಿಂದ ಹಿಂದೆ ಸರಿದ ಸೆರೆನಾ
ಇಟಾಲಿಯನ್ ಓಪನ್
ರೋಮ್,ಮೇ 14: ಇಟಾಲಿಯನ್ ಓಪನ್ ಟೆನಿಸ್ ಟೂರ್ನಮೆಂಟ್ನ ಮಹಿಳೆಯರ ಸಿಂಗಲ್ಸ್ ಸ್ಪರ್ಧೆಯಿಂದ ಸೆರೆನಾ ವಿಲಿಯಮ್ಸ್ ಹಿಂದೆ ಸರಿದಿದ್ದಾರೆ. ಬಲ ಮಂಡಿನೋವಿನಿಂದ ಬಳಲುತ್ತಿರುವ ಸೆರೆನಾ ವಿಲಿಯಮ್ಸ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎಂದು ಟೂರ್ನಿಯ ಆಯೋಜಕರು ತಿಳಿಸಿದ್ದಾರೆ.
ಮೊದಲ ಸುತ್ತಿನಲ್ಲಿ ಸ್ವೀಡನ್ನ ರೆಬೆಕ್ಕಾ ಪೀಟರ್ಸನ್ರನ್ನು 6-4,6-2 ನೇರ ಸೆಟ್ಗಳಿಂದ ಸೋಲಿಸಿದ್ದ 23 ಬಾರಿಯ ಗ್ರಾನ್ಸ್ಲಾಮ್ ಚಾಂಪಿಯನ್ ಸೆರೆನಾ 2ನೇ ಸುತ್ತಿನಲ್ಲಿ ಹಿರಿಯ ಸಹೋದರಿ ವೀನಸ್ ವಿಲಿಯಮ್ಸ್ರನ್ನು ಎದುರಿಸಬೇಕಾಗಿತ್ತು. ಇದೀಗ ಸೆರೆನಾ ಹಿಂದೆ ಸರಿದ ಕಾರಣ ವೀನಸ್ 3ನೇ ಸುತ್ತಿಗೆ ಪ್ರವೇಶಿಸಿದ್ದು, ಜೊಹನ್ನಾ ಕಾಂಟಾ ಅಥವಾ ಸ್ಲೋಯಾನ್ ಸ್ಟೀಫನ್ಸ್ರನ್ನು ಎದುರಿಸಲಿದ್ದಾರೆ. ಸೋಮವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ವೀನಸ್ ಬೆಲ್ಜಿಯಂನ ಎಲಿಸ್ ಮಾರ್ಟೆನ್ಸ್ರನ್ನು 7-5, 3-6,7-6(7/4)ಸೆಟ್ಗಳಿಂದ ಮಣಿಸಿದ್ದರು.
Next Story