ಮಾಜಿ ಈಜು ಚಾಂಪಿಯನ್ ಬಾಲಕೃಷ್ಣನ್ ರಸ್ತೆ ಅಪಘಾತಕ್ಕೆ ಬಲಿ
ಚೆನ್ನೈ, ಮೇ 15: ದಕ್ಷಿಣ ಏಶ್ಯನ್ ಗೇಮ್ಸ್ನ ಮಾಜಿ ಚಾಂಪಿಯನ್ ಎಂ.ಬಿ. ಬಾಲಕೃಷ್ಣನ್ ಬುಧವಾರ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
29ರ ಹರೆಯದ ಬಾಲಕೃಷ್ಣ ಮಂಗಳವಾರ ರಾತ್ರಿ ತನ್ನ ಸ್ನೇಹಿತನೊಂದಿಗೆ ದ್ವಿಚಕ್ರ ವಾಹನದಲ್ಲಿ ತನ್ನ ಮನೆಗೆ ತೆರಳುವ ಹಾದಿಯಲ್ಲಿ ವಾಹನವು ನಿಯಂತ್ರಣ ತಪ್ಪಿ ಲಾರಿಯ ಚಕ್ರದ ಅಡಿಗೆ ಬಿತ್ತು. ಆಗ ಅವರು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.
2007ರಲ್ಲಿ ಗುವಾಹಟಿಯಲ್ಲಿ ನಡೆದ ರಾಷ್ಟ್ರೀಯ ಗೇಮ್ಸ್ ನಲ್ಲಿ ಚಿನ್ನ ಜಯಿಸಿದ್ದರು. 2010ರಲ್ಲಿ ಹೊಸದಿಲ್ಲಿಯಲ್ಲಿ ನಡೆದಿದ್ದ ಸೀನಿಯರ್ ನ್ಯಾಶನಲ್ ಚಾಂಪಿಯನ್ಶಿಪ್ನಲ್ಲಿ 50ಮೀ. ಬ್ಯಾಕ್ಸ್ಟ್ರೋಕ್ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಅದೇ ವರ್ಷ ದಕ್ಷಿಣ ಏಶ್ಯನ್ ಗೇಮ್ಸ್ನಲ್ಲಿ 100 ಹಾಗೂ 200 ಮೀ.ಬ್ಯಾಕ್ಸ್ಟ್ರೋಕ್ನಲ್ಲಿ ಜಯಶಾಲಿಯಾಗಿದ್ದರು.
ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದು ಅಲ್ಲಿಯೇ ಉದ್ಯೋಗದಲ್ಲಿದ್ದ ಅವರು ಇತ್ತೀಚೆಗಷ್ಟೇ ಭಾರತಕ್ಕೆ ಬಂದಿದ್ದರು.
Next Story