ದಕ್ಷಿಣ ಕೊರಿಯಾ ವಿರುದ್ಧ ಭಾರತ ಗೆಲುವಿನ ಶುಭಾರಂಭ
ಮಹಿಳಾ ಹಾಕಿ
ಜಿನ್ಚೆಯೊನ್, ಮೇ 20: ಭಾರತದ ಮಹಿಳೆಯರ ಹಾಕಿ ತಂಡ ಇಲ್ಲಿ ನಡೆದ ಮೊದಲ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 2-1 ಅಂತರದಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.
ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಭಾರತದ ಮಹಿಳೆಯರ ತಂಡ ಗೆಲುವಿನೊಂದಿಗೆ ದಕ್ಷಿಣ ಕೊರಿಯಾ ಗೆಲುವು ದಾಖಲಿಸಿ ಮೂರು ಪಂದ್ಯಗಳ ಸರಣಿಯನ್ನು ಆರಂಭಿಸಿದೆ.
ಭಾರತದ ಯುವ ಸ್ಟ್ರೈಕರ್ ಲಾಲ್ರೆಮ್ಸಿಯಾಮಿ(20 ನೇ ನಿಮಿಷ) ಮತ್ತು ನವ್ನೀತ್ ಕೌರ್ (40ನೇ ನಿಮಿಷ) ತಲಾ 1 ಗೋಲು ಜಮೆ ಮಾಡಿ ಭಾರತದ ಗೆಲುವಿಗೆ ನೆರವಾದರು.
ಶಿನ್ ಹೈಯಾಂಗ್ (48ನೇ ನಿಮಿಷ) ಕೊರಿಯಾ ಪರ ಏಕೈಕ ಗೋಲು ಜಮೆ ಮಾಡಿದರು.
ಮೊದಲ ಕ್ವಾರ್ಟರ್ನಲ್ಲಿ ಭಾರತಕ್ಕೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಆದರೆ 20ನೇ ನಿಮಿಷದಲ್ಲಿ ಲಾಲ್ರೆಮ್ಸಿಯಾಮಿ ಗೋಲು ಜಮೆ ಮಾಡಿದರು. 40ನೇ ನಿಮಿಷದಲ್ಲಿ ನವ್ನೀತ್ ಸೊಗಸಾದ ಗೋಲು ಬಾರಿ ಭಾರತಕ್ಕೆ ಮುನ್ನಡೆ ಸಾಧಿಸಲು ನೆರವಾದರು.
ಭಾರತದ ಅನುಭವಿ ಗೋಲುಕೀಪರ್ ಸವಿತಾ ಅವರು ಎದುರಾಳಿ ತಂಡಕ್ಕೆ 1 ಗೋಲು ಜಮೆ ಮಾಡಲು ಅವಕಾಶ ನೀಡಿದರು.
ಬುಧವಾರ ಭಾರತ ಎರಡನೇ ಪಂದ್ಯವನ್ನು ಆಡಲಿದೆ.
Next Story