‘ಕ್ರಿಕೆಟ್ ಕಾಶಿ’ ಲಾರ್ಡ್ಸ್ ನಲ್ಲಿ ಲಾಯ್ಡ್ ಚೊಚ್ಚಲ ವಿಶ್ವಕಪ್‌ ನ ಹೀರೊ | Vartha Bharati- ವಾರ್ತಾ ಭಾರತಿ

---

ಕೆರಿಬಿಯನ್ನರಿಗೆ 2 ಬಾರಿ ಕಿರೀಟ

‘ಕ್ರಿಕೆಟ್ ಕಾಶಿ’ ಲಾರ್ಡ್ಸ್ ನಲ್ಲಿ ಲಾಯ್ಡ್ ಚೊಚ್ಚಲ ವಿಶ್ವಕಪ್‌ ನ ಹೀರೊ

ವಿಶ್ವಕಪ್‌ನೆನಪು

ಲಂಡನ್, ಮೇ 26: ವಿಶ್ವಕಪ್ ಕ್ರಿಕೆಟ್ ಆರಂಭಗೊಂಡು 44 ವರ್ಷಗಳು ಸಂದಿವೆ. ಕ್ರಿಕೆಟ್ ಕಾಶಿ ಖ್ಯಾತಿಯ ಲಾರ್ಡ್ಸ್‌ನಲ್ಲಿ 1975ರಲ್ಲಿ ಮೊದಲ ಜಾಗತಿಕ ಕ್ರಿಕೆಟ್ ಹಬ್ಬ ನಡೆಯಿತು. ಈ ವರೆಗೆ 11 ವಿಶ್ವಕಪ್‌ಗಳು ನಡೆದಿವೆ.

ವಿವಿಧ ಆವೃತ್ತಿಗಳ ವಿಶ್ವಕಪ್‌ಗಳಲ್ಲಿ ಪ್ರಶಸ್ತಿ ಎತ್ತಿದ ತಂಡದ ಪರ ಹಲವು ಮಂದಿ ಆಟಗಾರರು ದೊಡ್ಡ ಕೊಡುಗೆ ನೀಡಿದ್ದಾರೆ. ವಿಶ್ವಕಪ್ ಇತಿಹಾಸದಲ್ಲಿ ಅಂತಹ ಹೀರೊಗಳ ಕೊಡುಗೆ ಅಚ್ಚಳಿಯದೆ ಉಳಿದಿದೆ. ಆದರೆ ಮೊದಲ ನಾಲ್ಕು ಆವೃತ್ತಿಗಳಲ್ಲಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ನೀಡುವ ಸಾಂಪ್ರದಾಯ ಇರಲಿಲ್ಲ. ಆದರೆ ಇಲ್ಲಿ ಅವರು ತಂಡಗಳ ವಿಜಯಕ್ಕೆ ನೀಡಿರುವ ಕೊಡುಗೆ ಆಧಾರದಲ್ಲಿ ಗೆಲುವಿನ ರೂವಾರಿಗಳನ್ನು ಆಯ್ಕೆ ಮಾಡಲಾಗಿದೆ. 1975ರಲ್ಲಿ ಮೊದಲ ವಿಶ್ವಕಪ್‌ನಲ್ಲಿ ನಾಯಕ ಕ್ಲೈವ್ ಲಾಯ್ಡೆ ನಾಯಕತ್ವದ ವೆಸ್ಟ್ ಇಂಡೀಸ್ ತಂಡ ಪ್ರಶಸ್ತಿ ಜಯಿಸಿತ್ತು. ನಾಯಕ ಲಾಯ್ಡಿ ಅನುಭವಿ ಆಟಗಾರ. ಆದರೆ ತಂಡದಲ್ಲಿದ್ದ ಬಹುತೇಕ ಮಂದಿ ಆಟಗಾರರು ಅನನುಭವಿಗಳು. ಹೀಗಿದ್ದರೂ ಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು ಬಗ್ಗು ಬಡಿದು ಪ್ರಶಸ್ತಿ ಜಯಿಸಿತ್ತು.

ಲಾಯ್ಡ ತಂಡದ ಗೆಲುವಿನ ರೂವಾರಿಯಾಗಿದ್ದರು. ಅವರು ಮೂರು ಇನಿಂಗ್ಸ್‌ಗಳಲ್ಲಿ 52.66 ಸರಾಸರಿಯಂತೆ 158 ರನ್ ಸೇರಿಸಿದ್ದರು. 1 ಶತಕ ಮತ್ತು 1 ಅರ್ಧಶತಕ ದಾಖಲಿಸಿದ್ದರು.

ಪಾಕಿಸ್ತಾನ ವಿರುದ್ಧ 267 ರನ್‌ಗಳ ಸವಾಲನ್ನು ಪಡೆದ ಪಂದ್ಯದಲ್ಲಿ ಅವರು ಬ್ಯಾಟಿಂಗ್‌ಗೆ ಕ್ರೀಸ್‌ಗೆ ಆಗಮಿಸಿದಾಗ ವಿಂಡೀಸ್ 36ಕ್ಕೆ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಲಾಯ್ಡೆ 58 ಎಸೆತಗಳಲ್ಲಿ 53 ರನ್ ಗಳಿಸಿದರು. ಇನ್ನೂ 2 ಎಸೆತಗಳು ಬಾಕಿ ಇರುವಂತೆ ವಿಂಡೀಸ್ 1 ವಿಕೆಟ್ ಜಯ ಗಳಿಸಿತ್ತು.

ಆಸ್ಟ್ರೇಲಿಯ ವಿರುದ್ಧ ಫೈನಲ್‌ನಲ್ಲಿ ಲಾಯ್ಡ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು. ವಿಂಡೀಸ್ 50ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಲಾಯ್ಡಾ 85 ಎಸೆತಗಳಲ್ಲಿ 102 ರನ್ ಗಳಿಸಿದರು. ಲಾಯ್ಡಾ ಶತಕದ ನೆರವಿನಲ್ಲಿ ವಿಂಡೀಸ್ 60 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 291 ರನ್ ಗಳಿಸಿತ್ತು. ಗೆಲುವಿಗೆ 292 ರನ್ ಗಳಿಸಬೇಕಿದ್ದ ಆಸ್ಟ್ರೇಲಿಯದ ಪರ ನಾಯಕ ಇಯಾನ್ ಚಾಪೆಲ್ ಅರ್ಧಶತಕ (62) ಗಳಿಸಿ ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸುವ ಹಾದಿಯಲ್ಲಿದ್ದರು. ಆದರೆ ವಿವಿಯನ್ ರಿಚರ್ಡ್ಸ್ ಮೂಲಕ ಚಾಪೆಲ್‌ರನ್ನು ರನೌಟ್ ಮಾಡುವಲ್ಲಿ ಯಶಸ್ವಿಯಾದರು. ಲಾಯ್ಡಿ 12 ಓವರ್‌ಗಳಲ್ಲಿ 38 ರನ್ ನೀಡಿ (12-1-38-1)ಪಂದ್ಯದ ಚಿತ್ರಣವನ್ನು ಬದಲಿಸಿದರು. ಅಂತಿಮವಾಗಿ ಆಸ್ಟ್ರೇಲಿಯಕ್ಕೆ 58.4 ಓವರ್‌ಗಳಲ್ಲಿ 274 ರನ್ ಗಳಿಸಲು ಸಾಧ್ಯವಾಯಿತು. ಆಸ್ಟ್ರೇಲಿಯದ ಐವರು ದಾಂಡಿಗರು ರನೌಟಾಗಿದ್ದರು. ಕಿಥ್ ಬೊಯ್ಸೆ 4 ವಿಕೆಟ್(12-0-50-4) ಉಡಾಯಿಸಿ ವಿಂಡೀಸ್‌ಗೆ ಗೆಲುವಿಗೆ ಕೊಡುಗೆ ನೀಡಿದರು. ನಾಯಕ ಲಾಯ್ಡೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಗೆಲುವಿನೊಂದಿಗೆ ಮುಂದೆ 8 ವರ್ಷಗಳ ತನಕ ವಿಂಡೀಸ್ ವಿಶ್ವ ಚಾಂಪಿಯನ್ ಪಟ್ಟದಲ್ಲಿ ಮೆರೆದಾಡಿತ್ತು.

►1979 ರಿಚರ್ಡ್ಸ್ ವಿಂಡೀಸ್‌ನ ವಿಜಯದ ಶಿಲ್ಪಿ

ಎರಡನೇ ಆವೃತ್ತಿಯಲ್ಲಿ ವಿಂಡೀಸ್ ಪ್ರಶಸ್ತಿಯನ್ನು ಉಳಿಸಿಕೊಂಡಿತು. ವಿಂಡೀಸ್‌ನ ಗೆಲುವಿನಲ್ಲಿ ಮೂವರು ಆಟಗಾರರು ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಪಂದ್ಯಶ್ರೇಷ್ಠ ಪ್ರಶಸ್ತಿ ರಿಚರ್ಡ್ಸ್ಸ್‌ಗೆ ಒಲಿಯಿತು.

ಟೂರ್ನಿಯಲ್ಲಿ ಗೋರ್ಡನ್ ಗ್ರೀನಿಡ್ಜ್ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅವರು 4 ಇನಿಂಗ್ಸ್‌ಗಳಲ್ಲಿ 1 ಶತಕ ಮತ್ತು 2 ಅರ್ಧಶತಕಗಳನ್ನು ಒಳಗೊಂಡ 253 ರನ್ ಗಳಿಸಿದ್ದರು. ಕಾಲಿನ್ ಕ್ರಾಫ್ಟ್ ಎರಡು ಪಂದ್ಯಗಳಲ್ಲಿ ಗೆಲುವಿಗೆ ದೊಡ್ಡ ಕೊಡುಗೆ ನೀಡಿದ್ದರು. ಅವರು ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ತಲಾ 3 ವಿಕೆಟ್ ಉಡಾಯಿಸಿದ್ದರು. ಆದರೆ ನಾಕೌಟ್ ಹಂತದಲ್ಲಿ ವಿಂಡೀಸ್‌ಗೆ ರಿಚರ್ಡ್ಸ್ ಉತ್ತಮ ಕೊಡುಗೆ ನೀಡಿದರು. ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ 62 ಎಸೆತಗಳಲ್ಲಿ 42 ರನ್ ಗಳಿಸಿ 6 ವಿಕೆಟ್ ನಷ್ಟದಲ್ಲಿ 293 ರನ್ ಸೇರಿಸಲು ತಂಡಕ್ಕೆ ನೆರವಾದರು. ಗ್ರೀನಿಡ್ಜ್ ಈ ಪಂದ್ಯದಲ್ಲಿ 73 ರನ್ ಮತ್ತು ಡೆಸ್ಮಂಡ್ ಹೇನ್ಸ್ 65 ರನ್ ಕೊಡುಗೆ ನೀಡಿದ್ದರು. ಪಾಕಿಸ್ತಾನ 56.2 ಓವರ್‌ಗಳಲ್ಲಿ 250ಕ್ಕೆ ಆಲೌಟಾಗಿತ್ತು. 43 ರನ್‌ಗಳ ಗೆಲುವಿನೊಂದಿಗೆ ವಿಂಡೀಸ್ ಎರಡನೇ ಬಾರಿ ಫೈನಲ್ ತಲುಪಿತ್ತು. ಲಾರ್ಡ್ಸ್‌ನಲ್ಲಿ ನಡೆದ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ವಿಂಡೀಸ್ 92 ರನ್‌ಗಳ ಗೆಲುವಿನೊಂದಿಗೆ ವಿಶ್ವಕಪ್‌ನ್ನು ತನ್ನಲ್ಲೇ ಉಳಿಸಿಕೊಂಡಿತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವಿಂಡೀಸ್ 36 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತ್ತು. ರಿಚರ್ಡ್ಸ್ ಈ ಹಂತದಲ್ಲಿ ಕ್ರೀಸ್‌ಗೆ ಆಗಮಿಸಿ 207 ನಿಮಿಷಗಳ ಕ್ರೀಸ್‌ನಲ್ಲಿ ತಳವೂರಿ 138 ರನ್(157ಎ, 11ಬೌ,3ಸಿ) ಗಳಿಸಿದ್ದರು. ಕಾಲಿಸ್ ಕಿಂಗ್ 86 ರನ್ ನೀಡಿದ್ದರು. ಇವರ ಬ್ಯಾಟಿಂಗ್ ನೆರವಿನಲ್ಲಿ ವಿಂಡೀಸ್ 60 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 286 ರನ್ ಗಳಿಸಿತ್ತು. ಗೆಲುವಿಗೆ 287 ರನ್ ಗಳಿಸಬೇಕಿದ್ದ ಇಂಗ್ಲೆಂಡ್ 51 ಓವರ್‌ಗಳಲ್ಲಿ 194 ರನ್‌ಗಳಿಗೆ ಆಲೌಟಾಗಿ ತವರಲ್ಲಿ ಪ್ರಶಸ್ತಿ ಎತ್ತುವ ಅವಕಾಶ ಕಳೆದುಕೊಂಡಿತ್ತು. ವಿಂಡೀಸ್‌ನ ಗೆಲುವಿಗೆ ದೊಡ್ಡ ಕೊಡುಗೆ ನೀಡಿದ ರಿಚರ್ಡ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top