ನಡಾಲ್ ವಿರುದ್ಧ ಪಂದ್ಯಕ್ಕೆ ನಿಶಿಕೊರಿ ಸಜ್ಜು
ಪ್ಯಾರಿಸ್, ಜೂ.3: ಫ್ರೆಂಚ್ ಓಪನ್ನ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಯ ಸಾಧಿಸಿದ ಜಪಾನ್ನ ಕೀ ನಿಶಿಕೊರಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ್ದು, ಹಾಲಿ ಚಾಂಪಿಯನ್ ರಫೆಲ್ ನಡಾಲ್ ಸವಾಲು ಎದುರಿಸಲಿದ್ದಾರೆ. ಸೋಮವಾರ ಸುಮಾರು 4 ಗಂಟೆಗಳ ಕಾಲ ನಡೆದ ಪುರುಷರ ಸಿಂಗಲ್ಸ್ ನ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ 7ನೇ ಶ್ರೇಯಾಂಕದ ನಿಶಿಕೊರಿ ಫ್ರಾನ್ಸ್ನ ಬೆನೊಟ್ ಪೈರ್ ಅವರನ್ನು 6-2, 6-7(8/10), 6-2, 6-7(8/10) ಹಾಗೂ 7-5 ಸೆಟ್ಗಳ ಅಂತರದಿಂದ ಮಣಿಸಿ ಫ್ರೆಂಚ್ ಓಪನ್ನಲ್ಲಿ 3ನೇ ಬಾರಿ ಅಂತಿಮ-8ರ ಘಟ್ಟ ಪ್ರವೇಶಿಸಿದರು.
ರವಿವಾರ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಾಗ ನಿಶಿಕೊರಿ ಎರಡು ಸೆಟ್ಗಳ ಮುನ್ನಡೆಯಲ್ಲಿದ್ದರು. ಇಂದು ಸುಮಾರು 4 ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ ನಿಶಿಕೊರಿ ಗೆಲುವಿನ ನಗೆ ಬೀರಿದರು.
Next Story