ಆಸ್ಟ್ರೇಲಿಯಾ ವಿರುದ್ಧದ ಪಂದ್ಯ: ಧೋನಿ ಗ್ಲೌಸ್ ನಲ್ಲಿ ಬಲಿದಾನದ ಸಂಕೇತವಿಲ್ಲ!
Photo: Reuters
ಹೊಸದಿಲ್ಲಿ, ಜೂ.9: ಕ್ರಿಕೆಟ್ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ 2ನೆ ಪಂದ್ಯದಲ್ಲಿ ಭಾರತದ ಮಾಜಿ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಧರಿಸಿರುವ ಗ್ಲೌಸ್ ನಲ್ಲಿ ಬಲಿದಾನದ ಸಂಕೇತವನ್ನು ತೆಗೆಯಲಾಗಿದೆ. ಐಸಿಸಿ ಸೂಚನೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ದಕ್ಷಿಣ ಆಫ್ರಿಕ ವಿರುದ್ಧದ ಮೊದಲ ಪಂದ್ಯದಲ್ಲಿ ಧೋನಿ ಧರಿಸಿದ್ದ ಗ್ಲೌಸ್ ನಲ್ಲಿ ಸೇನೆಯ ಬಲಿದಾನವನ್ನು ಬಿಂಬಿಸುವ ಸಂಕೇತವಿತ್ತು. ಈ ಸಂಕೇತವನ್ನು ತೆಗೆಯಬೇಕು ಎಂದು ಬಿಸಿಸಿಐಗೆ ಐಸಿಸಿ ಸೂಚನೆ ನೀಡಿತ್ತು.
Next Story