ವಿಶ್ವಕಪ್: ಇಂಗ್ಲೆಂಡ್ಗೆ ಗೆಲುವು
ಸೌತಾಂಪ್ಟನ್ , ಜೂ.14: ವಿಶ್ವಕಪ್ನ 19ನೇ ಪಂದ್ಯದಲ್ಲಿ ಇಂಗ್ಲೆಂಡ್ ಜೋ ರೂಟ್ ಶತಕದ ನೆರವಿನಲ್ಲಿ ವೆಸ್ಟ್ಇಂಡೀಸ್ ವಿರುದ್ಧ 8 ವಿಕೆಟ್ಗಳ ಜಯ ಗಳಿಸಿದೆ.
ಗೆಲುವಿಗೆ 213 ರನ್ಗಳ ಸವಾಲನ್ನು ಪಡೆದ ಇಂಗ್ಲೆಂಡ್ 33.1 ಓವರ್ಗಳಲ್ಲಿ 2 ವಿಕೆಟ್ ನಷ್ಟದಲ್ಲಿ ಗೆಲುವಿಗೆ ಅಗತ್ಯ ರನ್ ದಾಖಲಿಸಿತು.
ಇಂಗ್ಲೆಂಡ್ನ ರೂಟ್ ಔಟಾಗದೆ 100 ರನ್, ವೋಕ್ಸ್ 40ರನ್, ಬೈರ್ಸ್ಟೋವ್ 45 ರನ್ ಮತ್ತು ಬೆನ್ ಸ್ಟೋಕ್ಸ್ ಔಟಾಗದೆ 10 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ವಿಂಡೀಸ್ 212: ಇಂಗ್ಲೆಂಡ್ನ ದಾಳಿಗೆ ಸಿಲುಕಿ 44.4 ಓವರ್ಗಳಲ್ಲಿ 212 ರನ್ಗಳಿಗೆ ಆಲೌಟಾಗಿತ್ತು
Next Story