ಪತ್ರಿಕಾಗೋಷ್ಠಿ ತ್ಯಜಿಸಲು ಮುಂದಾದ ಅಫ್ಘಾನ್ ನಾಯಕ ನೆಬ್
ಹೊಸದಿಲ್ಲಿ, ಜೂ.19: ರೆಸ್ಟೊರೆಂಟ್ವೊಂದರಲ್ಲಿ ನಡೆದ ಘಟನೆಯ ಬಗ್ಗೆ ಪದೇ ಪದೇ ಪ್ರಶ್ನಿಸಿದಾಗ ಅಸಮಾಧಾನಗೊಂಡ ಅಫ್ಘಾನಿಸ್ತಾನದ ನಾಯಕ ಗುಲ್ಬದ್ದೀನ್ ನೈಬ್ ಪತ್ರಿಕಾಗೋಷ್ಠಿಯಿಂದ ಎದ್ದುಹೋಗುವುದಾಗಿ ಬೆದರಿಸಿದ ಘಟನೆ ನಡೆದಿದೆ. ಮ್ಯಾಂಚೆಸ್ಟರ್ ರೆಸ್ಟೊರೆಂಟ್ನಲ್ಲಿ ಅಫ್ಘಾನ್ ತಂಡದ ಕೆಲವು ಸದಸ್ಯರುಗಳು ಸಾರ್ವಜನಿಕರೊಂದಿಗೆ ಜಗಳವಾಡಿದ್ದ ಕುರಿತ ವರದಿಯ ಬಗ್ಗೆ ನೈಬ್ರಲ್ಲಿ ಕೇಳಿದಾಗ ಆಕ್ರೋಶ ವ್ಯಕ್ತಪಡಿಸಿದರು.
ಜಗಳ ನಡೆದಿರುವ ಬಗ್ಗೆ ನನ್ನಲ್ಲಿ ಮಾಹಿತಿಯಿಲ್ಲ. ಈ ಕುರಿತು ನೀವು ನನ್ನ ಭದ್ರತಾ ಅಧಿಕಾರಿ ಬಳಿ ವಿಚಾರಿಸಿ. ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ನೈಬ್ ಹೇಳಿದರು. ಆಗ ಮತ್ತೊಮ್ಮೆ ಘಟನೆಯ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ಪತ್ರಿಕಾಗೋಷ್ಠಿಯಿಂದ ಹೊರ ನಡೆಯುವೆ ಎಂದು ಬೆದರಿಸಿದರು.
Next Story