ಫೆಡರರ್ಗೆ 10ನೇ ಬಾರಿ ಹ್ಯಾಲಿ ಕಿರೀಟ
ಬರ್ಲಿನ್, ಜೂ.23: ಬೆಲ್ಜಿಯಂನ ಡೇವಿಡ್ ಗೊಫ್ಪಿನ್ ವಿರುದ್ಧ ಎಟಿಪಿ ಹಾಲೆ ಫೈನಲ್ನಲ್ಲಿ ಇಂದು ಗೆಲುವು ದಾಖಲಿಸಿರುವ ಸ್ವಿಟ್ಜರ್ಲೆಂಡ್ನ ರೋಜರ್ ಫೆಡರರ್ 10ನೇ ಬಾರಿ ಹ್ಯಾಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಇಂದು ನಡೆದ ಫೈನಲ್ನಲ್ಲಿ ಗೊಫ್ಪಿನ್ ವಿರುದ್ಧ 7-6(7/2), 6-1 ಅಂತರದಲ್ಲಿ ಜಯ ದಾಖಲಿಸಿದ ಫೆಡರರ್ ಹಾಲೆ ಕಿರೀಟವನ್ನು ತನ್ನದಾಗಿಸಿಕೊಂಡರು. ಇದರೊಂದಿಗೆ ಫೆಡರರ್ ತಾನು ಜಯಿಸಿರುವ ಸಿಂಗಲ್ಸ್ ಪ್ರಶಸ್ತಿಗಳ ಸಂಖ್ಯೆಯನ್ನು 102ಕ್ಕೆ ಏರಿಸಿದರು.
Next Story