ನಾವು ಮುಳುಗಿದ್ದೇವೆ, ಬಾಂಗ್ಲಾವನ್ನೂ ಮುಳುಗಿಸುತ್ತೇವೆ: ಅಫ್ಘಾನ್ ನಾಯಕ ನೈಬ್
ಲಂಡನ್, ಜೂ.24: ಅಫ್ಘಾನಿಸ್ತಾನ ವಿಶ್ವಕಪ್ ಕ್ರಿಕೆಟ್ನ ಕಳೆದ ಎರಡು ಪಂದ್ಯಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಸೋಮವಾರ ಸೌತಾಂಪ್ಟನ್ನಲ್ಲಿ ನಡೆಯಲಿರುವ ಗ್ರೂಪ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ.
ಬಾಂಗ್ಲಾ ಟೈಗರ್ಸ್ ವಿರುದ್ಧ ಹೇಗೆ ತಯಾರಿ ನಡೆಸಿದ್ದೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ ‘‘ನಾವು ಈಗಾಗಲೇ ಮುಳುಗಿದ್ದೇವೆ. ಆದರೆ, ನಾವು ಇದೀಗ ಅವರನ್ನು (ಬಾಂಗ್ಲಾದೇಶ)ಮುಳುಗಿಸುತ್ತೇವೆ’’ ಎಂದರು.
ಅಫ್ಘಾನಿಸ್ತಾನ ತಾನಾಡಿರುವ 2ನೇ ವಿಶ್ವಕಪ್ನಲ್ಲಿ ಈ ತನಕ ಆಡಿರುವ ಎಲ್ಲಾ 6 ಪಂದ್ಯಗಳಲ್ಲಿ ಸೋಲುಂಡಿದೆ. ಮೊದಲ 4 ಪಂದ್ಯಗಳಲ್ಲಿ ಪೂರ್ಣ 50 ಓವರ್ ಆಡಿಲ್ಲ. ಶನಿವಾರ ಭಾರತ ವಿರುದ್ಧ ಕೊನೆಯ ತನಕ ಹೋರಾಡಿ ಕೇವಲ 11 ರನ್ನಿಂದ ಸೋತಿತ್ತು.
‘‘ನಾವು ಬಾಂಗ್ಲಾದೇಶವನ್ನು ಹಗುರವಾಗಿ ಪರಿಗಣಿಸುವುದಿಲ್ಲ. ಆ ತಂಡ ಬಲಿಷ್ಠವಾಗಿದೆ. ಈ ಹಂತದಲ್ಲಿ ಅದು ತುಂಬಾ ಪ್ರಗತಿಯಾಗಿದೆ. ನಮ್ಮದು ದುರ್ಬಲ ತಂಡವಲ್ಲ. ಇಂಗ್ಲೆಂಡ್ನ ಮೊದಲ ಪ್ರವಾಸದ ಮೊದಲ ನಾಲ್ಕೈದು ಪಂದ್ಯಗಳಲ್ಲಿ ಕೆಟ್ಟದಾಗಿ ಆಡಿದ್ದೇವೆ. ಈಗ ನಾವು ದಿನದಿಂದ ದಿನಕ್ಕೆ ಸುಧಾರಿಸಿದ್ದೇವೆ. ನಾಳೆ ನಮ್ಮ ದಿನವಾಗುವ ವಿಶ್ವಾಸವಿದೆ’’ ಎಂದರು.