ವಿಶ್ವಕಪ್: ಅಫ್ಘಾನ್ ಗೆಲುವಿಗೆ 263 ರನ್ ಗುರಿ ನೀಡಿದ ಬಾಂಗ್ಲಾ
ಮುಶ್ಫಿಕುರ್ರಹೀಂ, ಶಾಕಿಬ್ ಅರ್ಧಶತಕ
ಸೌತಾಂಪ್ಟನ್, ಜೂ.24: ಹಿರಿಯ ಆಟಗಾರ ಮುಶ್ಫಿಕುರ್ರಹೀಂ ಅರ್ಧಶತಕ(83, 87 ಎಸೆತ)ಸಹಾಯದಿಂದ ಬಾಂಗ್ಲಾದೇಶ ತಂಡ ಅಫ್ಘಾನಿಸ್ತಾನಕ್ಕೆ ವಿಶ್ವಕಪ್ನ 31ನೇ ಪಂದ್ಯದ ಗೆಲುವಿಗೆ 263 ರನ್ ಗುರಿ ನೀಡಿದೆ.
ಟಾಸ್ ಜಯಿಸಿದ ಅಫ್ಘಾನಿಸ್ತಾನ ನಾಯಕ ಗುಲ್ಬದ್ದೀನ್ನೈಬ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.
ಬಾಂಗ್ಲಾದ ಪರ ಶಾಕಿಬ್ ಅಲ್ ಹಸನ್(51, 69 ಎಸೆತ, 1 ಬೌಂಡರಿ), ತಮೀಮ್ ಇಕ್ಬಾಲ್(36, 53 ಎಸೆತ)ಅಗ್ರ ಸರದಿಯಲ್ಲಿ ತಂಡವನ್ನು ಆಧರಿಸಿದರು.
ಬಾಂಗ್ಲಾ ತಂಡ ರನ್ಗಾಗಿ ಪರದಾಡುತ್ತಿದ್ದಾಗ ಕ್ರೀಸ್ ಆಕ್ರಮಿಸಿಕೊಂಡ ರಹೀಮ್ 48.3ನೇ ಓವರ್ ತನಕ ಅಫ್ಘಾನ್ ದಾಂಡಿಗರನ್ನು ಕಾಡಿದರು. 35ನೇ ಅರ್ಧಶತಕ ಸಿಡಿಸಿದ ರಹೀಮ್ 87 ಎಸೆತಗಳಲ್ಲಿ 4 ಬೌಂಡರಿ,1 ಸಿಕ್ಸರ್ ಸಹಿತ 83 ರನ್ ಗಳಿಸಿ ಝದ್ರಾನ್ಗೆ ವಿಕೆಟ್ ಒಪ್ಪಿಸಿದರು.
ಮೊಸಾಡೆಕ್ ಹುಸೈನ್(35) ಹಾಗೂ ಮಹ್ಮೂದುಲ್ಲಾ(27) ಎರಡಂಕೆಯ ಸ್ಕೋರ್ ಗಳಿಸಿದರು.
ಅಫ್ಘಾನ್ ಪರ ಮುಜೀಬ್ವುರ್ರಹ್ಮಾನ್(3-39) ಹಾಗೂ ಗುಲ್ಬದ್ದೀನ್ ನೈಬ್(2-56) ಐದು ವಿಕೆಟ್ ಹಂಚಿಕೊಂಡರು.
Next Story