ವಿಶ್ವಕಪ್ :ಅಫ್ಘಾನಿಸ್ತಾನ ವಿರುದ್ದ ಪಾಕ್ಗೆ ಪ್ರಯಾಸದ ಜಯ
ಲೀಡ್ಸ್, ಜೂ.29: ಆಲ್ರೌಂಡರ್ ಇಮಾದ್ ವಸೀಂ (ಔಟಾಗದೆ 49)ಸಂದರ್ಭೋಚಿತ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ತಂಡ ಅಫ್ಘಾನಿಸ್ತಾನ ವಿರುದ್ಧದ ವಿಶ್ವಕಪ್ನ 36ನೇ ಪಂದ್ಯವನ್ನು 3 ವಿಕೆಟ್ಗಳಿಂದ ಗೆಲುವು ದಾಖಲಿಸಿತು.
ಗೆಲ್ಲಲು 228 ರನ್ ಗುರಿ ಪಡೆದ ಪಾಕಿಸ್ತಾನ 49.4 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 230 ರನ್ ಗಳಿಸಿ ಪ್ರಯಾಸದ ಗೆಲುವು ದಾಖಲಿಸಿತು.
ಪಾಕ್ 39ನೇ ಓವರ್ನಲ್ಲಿ 156 ರನ್ಗೆ 6 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯಲ್ಲಿತ್ತು. ಆಗ ತಂಡಕ್ಕೆ ಆಸರೆಯಾದ ವಸೀಂ (ಔಟಾಗದೆ 49)ಶಾದಾಬ್ ಖಾನ್(11) ಅವರೊಂದಿಗೆ 7ನೇ ವಿಕೆಟ್ಗೆ 50 ರನ್ ಜೊತೆಯಾಟ ನಡೆಸಿ ತಂಡಕ್ಕೆ ಗೆಲುವು ತಂದರು.
Next Story