ಚಾಂಪಿಯನ್ ಜೊಕೊವಿಕ್, ವಾವ್ರಿಂಕ ಶುಭಾರಂಭ
ವಿಂಬಲ್ಡನ್ ಚಾಂಪಿಯನ್ಶಿಪ್
ಲಂಡನ್,ಜು.1: ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್, ಸ್ವಿಸ್ ಆಟಗಾರ ಸ್ಟಾನ್ ವಾವ್ರಿಂಕ ವಿಂಬಲ್ಡನ್ ಚಾಂಪಿಯನ್ಶಿಪ್ನಲ್ಲಿ ಶುಭಾರಂಭ ಮಾಡಿದರು. ಇಲ್ಲಿ ಸೋಮವಾರ ಆರಂಭವಾದ ಚಾಂಪಿಯನ್ಶಿಪ್ನ ಪುರುಷರ ಸಿಂಗಲ್ಸ್ನ ಮೊದಲ ಸುತ್ತಿನ ಪಂದ್ಯದಲ್ಲಿ ಜೊಕೊವಿಕ್ ಜರ್ಮನಿಯ ಫಿಲಿಪ್ ಕೊಹ್ಸ್ಲ್ಕ್ರೈಬರ್ರನ್ನು 6-3, 7-5, 6-3 ಸೆಟ್ಗಳ ಅಂತರದಿಂದ ಮಣಿಸಿದರು. ಈ ಮೂಲಕ ಐದನೇ ವಿಂಬಲ್ಡನ್ ಚಾಂಪಿಯನ್ಶಿಪ್ ಗೆಲ್ಲುವತ್ತ ಮೊದಲ ಹೆಜ್ಜೆ ಇಟ್ಟಿದ್ದಾರೆ.
16ನೇ ಗ್ರಾನ್ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಅಮೆರಿಕದ ಡೆನಿಸ್ ಕುಡ್ಲಾರನ್ನು ಎದುರಿಸಲಿದ್ದಾರೆ.
34ರ ಹರೆಯದ ವಾವ್ರಿಂಕ ಮತ್ತೊಂದು ವಿಂಬಲ್ಡನ್ ಸಿಂಗಲ್ಸ್ ಪಂದ್ಯದಲ್ಲಿ ಬೆಲ್ಜಿಯಂನ ಕ್ವಾಲಿಫೈಯರ್ ರುಬೆನ್ ಬೆಮೆಲ್ಮನ್ಸ್ರನ್ನು 6-3, 6-2, 6-2 ಸೆಟ್ಗಳಿಂದ ಸೋಲಿಸಿದರು.
2017ರ ಚಾಂಪಿಯನ್ಶಿಪ್ನಲಿ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಕಳೆದ ವರ್ಷ ಅಗ್ರ-200 ರ್ಯಾಂಕಿನೊಂದಿಗೆ ವಿಂಬಲ್ಡನ್ ಆಡಿದ್ದ ವಾವ್ರಿಂಕ ಮೊದಲ ಸುತ್ತಿನಲ್ಲಿ ಗ್ರಿಗೊರ್ ಡಿಮಿಟ್ರೊವ್ರನ್ನು ಸೋಲಿಸಿದ್ದರು. ಆದರೆ, ಮುಂದಿನ ಸುತ್ತಿನಲ್ಲಿ ಥಾಮಸ್ ಫ್ಯಾಬಿಯಾನೊರನ್ನು ಸೋಲಿಸಿದ್ದರು.