ವಿಶ್ವಕಪ್: ವಿಂಡೀಸ್ಗೆ 23ರನ್ಗಳ ಜಯ
ಲೀಡ್ಸ್, ಜು.4: ವಿಶ್ವಕಪ್ನ 42ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ವೆಸ್ಟ್ಇಂಡೀಸ್ 23 ರನ್ಗಳ ಜಯ ಗಳಿಸಿದೆ.
ಗೆಲುವಿಗೆ 312 ರನ್ಗಳ ಸವಾಲನ್ನು ಪಡೆದ ಅಫ್ಘಾನಿಸ್ತಾನ ತಂಡ ನಿಗದಿತ 50 ಓವರ್ಗಳಲ್ಲಿ 288ರನ್ ಗಳಿಸುವಷ್ಟರಲ್ಲಿ ಆಲೌಟಾಗಿದೆ.
ಇದರೊಂದಿಗೆ ವೆಸ್ಟ್ಇಂಡೀಸ್ ಕೂಟದಲ್ಲಿ ಆಡಿದ 9 ಪಂದ್ಯಗಳ ಪೈಕಿ 2ನೇ ಗೆಲುವಿನೊಂದಿಗೆ ಅಭಿಯಾನ ಕೊನೆಗೊಳಿಸಿತು.
ಅಫ್ಘಾನಿಸ್ತಾನ ಆಡಿದ ಎಲ್ಲ 9 ಪಂದ್ಯಗಳಲ್ಲೂ ಸೋಲು ಅನುಭವಿಸಿ ಕೂಟದಿಂದ ನಿರ್ಗಮಿಸಿತು.
ಅಫ್ಘಾನಿಸ್ತಾನದ ಆರಂಭಿಕ ದಾಂಡಿಗ ಮತ್ತು ನಾಯಕ ಗುಲ್ಬದಿನ್ ನೈಬ್(5) ಅವರನ್ನು ಬೇಗನೆ ಕಳೆದುಕೊಂಡರೂ ರಹ್ಮತ್ ಅಲಿ(62) ಮತ್ತು ವಿಕೆಟ್ ಕೀಪರ್ ಇಕ್ರಮ್ ಅಲಿ(86) ಅರ್ಧಶತಕಗಳ ಕೊಡುಗೆ, ನಜೀಬುದ್ದೀನ್ ಝದ್ರಾನ್(31), ಅಸ್ಘರ್ ಅಫ್ಘನ್(40) ಎರಡಂಕೆಯ ನೆರವಿನಲ್ಲಿ ಅಫ್ಘಾನಿಸ್ತಾನ ಹೋರಾಟ ನಡೆಸಿದರೂ ಗೆಲುವಿನ ದಡ ಸೇರಲಿಲ್ಲ.
ವಿಂಡೀಸ್ನ ಬ್ರಾಥ್ ವೇಟ್ 63ಕ್ಕೆ 4, ರೋಚ್ 37ಕ್ಕೆ 3 ವಿಕೆಟ್ ಹಂಚಿಕೊಂಡರು.
Next Story