ವಿಶ್ವಕಪ್: ಬಾಂಗ್ಲಾ ವಿರುದ್ಧ ಪಾಕ್ಗೆ 94 ರನ್ಗಳ ಜಯ
ಲಾರ್ಡ್ಸ್, ಜು.5: ವಿಶ್ವಕಪ್ನ 43ನೇ ಪಂದ್ಯದಲ್ಲಿ ಶುಕ್ರವಾರ ಬಾಂಗ್ಲಾದೇಶ ತಂಡದ ವಿರುದ್ಧ ಪಾಕಿಸ್ತಾನ 94 ರನ್ಗಳ ಅಂತರದಲ್ಲಿ ಜಯ ಗಳಿಸಿದ್ದು, ಈ ಗೆಲುವಿನೊಂದಿಗೆ ವಿಶ್ವಕಪ್ನಲ್ಲಿ ಪಾಕ್ನ ಅಭಿಯಾನ ಕೊನೆಗೊಂಡಿದೆ.
ಗೆಲುವಿಗೆ 316 ರನ್ಗಳ ಸವಾಲನ್ನು ಪಡೆದ ಬಾಂಗ್ಲಾದೇಶ ತಂಡ 44.1 ಓವರ್ಗಳಲ್ಲಿ 221 ರನ್ಗಳಿಗೆ ಆಲೌಟಾಗಿದೆ.
ಶಾಹಿನ್ ಅಫ್ರಿದಿ(35ಕ್ಕೆ 6) ಮತ್ತು ಶದಾಬ್ ಖಾನ್(59ಕ್ಕೆ 2) ದಾಳಿಗೆ ಸಿಲುಕಿದ ಬಾಂಗ್ಲಾ ಬೇಗನೇ ಇನಿಂಗ್ಸ್ ಮುಗಿಸಿತು. ಬಾಂಗ್ಲಾದ ಶಾಕಿಬ್ ಅಲ್ ಹಸನ್(64) ತಂಡದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು.
Next Story