ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ ಮುಖ್ಯಸ್ಥರಾಗಿ ರಾಹುಲ್ ದ್ರಾವಿಡ್ ಆಯ್ಕೆ
ಮುಂಬೈ, ಜು.9: ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(ಎನ್ಸಿಎ)ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ.
ದ್ರಾವಿಡ್ ಎನ್ಸಿಎನ ಎಲ್ಲ ಕ್ರಿಕೆಟ್ ಸಂಬಂಧಿ ಚಟುವಟಿಕೆಗಳ ಮೇಲೆ ಮೇಲ್ವಿಚಾರಣೆ ನಡೆಸಲಿದ್ದಾರೆ. ಎನ್ಸಿಎನ ಆಟಗಾರರು ಹಾಗೂ ಕೋಚ್ಗಳು, ಸಹಾಯಕ ಸಿಬ್ಬಂದಿಗೆ ತರಬೇತಿ, ಕೋಚಿಂಗ್ ಹಾಗೂ ಉತ್ತೇಜನ ನೀಡಲಿದ್ದಾರೆ ಎಂದು ಬಿಸಿಸಿಐ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಭಾರತ ಎ, ಇಂಡಿಯಾ ಅಂಡರ್-19, ಭಾರತ ಅಂಡರ್-23 ತಂಡಗಳು ಸಹಿತ ರಾಷ್ಟ್ರೀಯ ಪುರುಷ ಹಾಗೂ ಮಹಿಳಾ ಮುಖ್ಯ ಕೋಚ್ಗಳೊಂದಿಗೆ ದ್ರಾವಿಡ್ ಕೆಲಸ ಮಾಡಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
Next Story