ವಿಶ್ವಕಪ್ ಟೂರ್ನಿಯಲ್ಲಿ ಕಿವೀಸ್ ಪರ ಗರಿಷ್ಠ ಸ್ಕೋರ್ ಗಳಿಸಿದ ವಿಲಿಯಮ್ಸನ್
ಮ್ಯಾಂಚೆಸ್ಟರ್, ಜು.9: ಕೇನ್ ವಿಲಿಯಮ್ಸನ್ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಝಿಲ್ಯಾಂಡ್ನ ಪರ ಗರಿಷ್ಠ ರನ್ ಗಳಿಸಿದ ಸಾಧನೆ ಮಾಡಿದರು.
ಭಾರತ ವಿರುದ್ಧ ಮಂಗಳವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ 95 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ 67 ರನ್ ಗಳಿಸುವುದರೊಂದಿಗೆ ವಿಲಿಯಮ್ಸನ್ ಈ ಸಾಧನೆ ಮಾಡಿದರು. ವಿಲಿಯಮ್ಸನ್ 79 ಎಸೆತಗಳಲ್ಲಿ 39ನೇ ಅರ್ಧಶತಕ ಪೂರೈಸಿದರು.
ವಿಲಿಯಮ್ಸನ್ ವಿಶ್ವಕಪ್ನಲ್ಲಿ ಒಟ್ಟು 548 ರನ್ ಗಳಿಸಿದರು. 2015ರ ವಿಶ್ವಕಪ್ನಲ್ಲಿ ಒಟ್ಟು 547 ರನ್ ಗಳಿಸಿದ್ದ ಆರಂಭಿಕ ಆಟಗಾರ ಗಪ್ಟಿಲ್ ದಾಖಲೆಯನ್ನು ಮುರಿದರು.
ಕಿವೀಸ್ 4ನೇ ಓವರ್ನಲ್ಲಿ 1 ರನ್ಗೆ 1 ವಿಕೆಟ್ ಕಳೆದುಕೊಂಡಾಗ ತಂಡವನ್ನು ಆಧರಿಸಿದ ವಿಲಿಯಮ್ಸನ್ ಟೂರ್ನಿಯಲ್ಲಿ 4ನೇ ಬಾರಿ 50ಕ್ಕೂ ಅಧಿಕ ರನ್ ಗಳಿಸಿದ್ದಲ್ಲದೆ, ನಿಕೊಲ್ಸ್ ಹಾಗೂ ಟೇಲರ್ ಅವರೊಂದಿಗೆ ಕ್ರಮವಾಗಿ 2ನೇ ಹಾಗೂ 3ನೇ ವಿಕೆಟ್ ಜೊತೆಯಾಟದಲ್ಲಿ 68 ಹಾಗೂ 65 ರನ್ ಸೇರಿಸಿದರು.
Next Story