ಭಾರತ ಸೂಪರ್-8ಕ್ಕೆ ಅರ್ಹತೆ
ಕಾಮನ್ವೆಲ್ತ್ ಟಿಟಿ
ಕಟಕ್, ಜು.18: ಆತಿಥೇಯ ಭಾರತ 21ನೇ ಆವೃತ್ತಿಯ ಕಾಮನ್ವೆಲ್ತ್ ಟೇಬಲ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ಉಜ್ವಲ ಆರಂಭ ಪಡೆದಿದೆ. ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯುವುದರೊಂದಿಗೆ ಪುರುಷರ ಹಾಗೂ ಮಹಿಳಾ ತಂಡಗಳು ಟೀಮ್ ಸ್ಪರ್ಧೆಗಳಲ್ಲಿ ಅಂತಿಮ-8ರ ಘಟ್ಟ ತಲುಪಿವೆ.
ಭಾರತದ ಟಿಟಿ ಆಟಗಾರರು ಕೇವಲ 2 ಪಂದ್ಯಗಳನ್ನು ಸೋತಿದ್ದಾರೆ. ಅಚಂತಾ ಕಮಲ್ ಸಿಂಗಾಪುರದ ಝಿಯು ಕ್ಲಾರೆನ್ಸ್ ಚೀಚ್ ವಿರುದ್ಧ ಪುರುಷರ ಇವೆಂಟ್ನಲ್ಲಿ ಸೋತಿದ್ದಾರೆ. ಅಹಿಕಾ ಮುಖರ್ಜಿ ಮಹಿಳೆಯರ ವಿಭಾಗದಲ್ಲಿ ಶ್ರೀಲಂಕಾದ ಚಮತ್ಸಾರಾ ಫೆರ್ನಾಂಡೊ ಎದುರು ಶರಣಾದರು.
ಶರತ್ ಕಮಲ್, ಜಿ.ಸತ್ಯನ್ ಹಾಗೂ ಹರ್ಮೀತ್ ದೇಸಾಯಿ ಅವರನ್ನೊಳಗೊಂಡ ತಂಡ ಮೊದಲಿಗೆ ಸ್ಕಾಟ್ಲೆಂಡ್ನ್ನು 3-0 ಅಂತರದಿಂದ ಮಣಿಸಿತು. ಸಿಂಗಾಪುರದ ವಿರುದ್ಧವೂ 3-0 ಅಂತರದಿಂದ ಜಯ ಸಾಧಿಸಿತು.
ಮಹಿಳೆಯರ ಇವೆಂಟ್ನಲ್ಲಿ ಮಣಿಕಾ ಬಾತ್ರಾ, ಅರ್ಚನಾ ಕಾಮತ್ ಹಾಗೂ ಮುಖರ್ಜಿ ಅವರನ್ನೊಳಗೊಂಡ ತಂಡ ಶ್ರೀಲಂಕಾದ ವಿರುದ್ಧ 3-0 ಅಂತರದಿಂದ ಜಯ ಸಾಧಿಸಿತು. ಈ ಜೋಡಿ ದಕ್ಷಿಣ ಆಫ್ರಿಕ ವಿರುದ್ಧ 3-0 ಅಂತರದಿಂದ ಜಯ ಸಾಧಿಸಿ ಗಮನ ಸೆಳೆಯಿತು.