ಸಿಂಧು ಕ್ವಾರ್ಟರ್ ಫೈನಲ್‌ಗೆ | Vartha Bharati- ವಾರ್ತಾ ಭಾರತಿ

---

ಇಂಡೋನೇಶ್ಯ ಓಪನ್

ಸಿಂಧು ಕ್ವಾರ್ಟರ್ ಫೈನಲ್‌ಗೆ

ಜಕಾರ್ತ, ಜು.18: ಭಾರತದ ಅಗ್ರ ಶಟ್ಲರ್ ಪಿ.ವಿ.ಸಿಂಧು ಇಂಡೋನೇಶ್ಯ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಇಲ್ಲಿ ಗುರುವಾರ ಒಂದು ಗಂಟೆ, 2 ನಿಮಿಷಗಳ ಕಾಲ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಐದನೇ ಶ್ರೇಯಾಂಕದ ಸಿಂಧು ಶ್ರೇಯಾಂಕರಹಿತ ಮಿಯಾ ಬ್ಲಿಚ್‌ಫೆಲ್ಟ್ ವಿರುದ್ಧ 21-14, 17-21, 21-11 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು. ಸಿಂಧು ಈ ವರ್ಷ ವಿಶ್ವದ ನಂ.13ನೇ ಡೆನ್ಮಾರ್ಕ್ ಆಟಗಾರ್ತಿಯ ವಿರುದ್ಧ ಮೂರನೇ ಗೆಲುವು ದಾಖಲಿಸಿದರು. ಈ ಹಿಂದೆ ಇಂಡಿಯನ್ ಓಪನ್ ಹಾಗೂ ಸಿಂಗಾಪುರ ಓಪನ್‌ನಲ್ಲಿ ಬ್ಲಿಚ್‌ಫೆಲ್ಟ್ ವಿರುದ್ಧ ಜಯ ಸಾಧಿಸಿದ್ದರು.

 ಸಿಂಧು ಮೊದಲ ಗೇಮ್‌ನ್ನು 21-14 ಅಂತರದಿಂದ ಗೆದ್ದುಕೊಂಡರು. ಎರಡನೇ ಗೇಮ್‌ನಲ್ಲಿ ಉಭಯ ಶಟ್ಲರ್‌ಗಳ ಮಧ್ಯೆ ತೀವ್ರ ಹೋರಾಟ ಕಂಡುಬಂದಿತು.ಬ್ಲಿಚ್‌ಫೆಲ್ಟ್ 10-7 ಮುನ್ನಡೆಯಲ್ಲಿದ್ದರು. ಸತತ ಮೂರು ಅಂಕ ಗಳಿಸಿದ ಸಿಂಧು ಸ್ಕೋರನ್ನು 10-10ರಿಂದ ಸಮಬಲಗೊಳಿಸಿದರು. ಸಿಂಧು ಅವರ ಅನಗತ್ಯ ತಪ್ಪುಗಳ ಸಂಪೂರ್ಣ ಲಾಭ ಪಡೆದ ಡೆನ್ಮಾರ್ಕ್ ಆಟಗಾರ್ತಿ 2ನೇ ಗೇಮ್‌ನ್ನು 21-17 ಅಂತರದಿಂದ ಗೆದ್ದುಕೊಂಡರು.

ಮೂರನೇ ಹಾಗೂ ನಿರ್ಣಾಯಕ ಗೇಮ್ ಏಕಪಕ್ಷೀಯವಾಗಿ ಸಾಗಿತು. ಆರಂಭದಲ್ಲಿ ಬ್ಲಿಚ್‌ಫೆಲ್ಟ್ ರಿಂದ ಪ್ರತಿರೋಧ ಎದುರಿಸಿದ್ದ ಸಿಂಧು ಅಂತಿಮವಾಗಿ 21-11 ಅಂತರದಿಂದ ಜಯ ಸಾಧಿಸಿದರು.

ಸಿಂಧು ಮುಂದಿನ ಸುತ್ತಿನಲ್ಲಿ ಜಪಾನ್‌ನ ಮೂರನೇ ಶ್ರೇಯಾಂಕದ ನೊರೊಮಿ ಒಕುಹರಾ ಅವರನ್ನು ಎದುರಿಸಲಿದ್ದಾರೆ. ಒಕುಹರಾ ಮತ್ತೊಂದು ಎರಡನೇ ಸುತ್ತಿನ ಪಂದ್ಯದಲ್ಲಿ ಮಲೇಶ್ಯಾದ ಸೊನಿಯಾ ಚೆಯಾರನ್ನು 21-7, 21-16 ಅಂತರದಿಂದ ಮಣಿಸಿದ್ದಾರೆ.

ಪುರುಷರ ಡಬಲ್ಸ್ ಇವೆಂಟ್‌ನಲ್ಲಿ ಭಾರತದ ಅಭಿಯಾನ ಕೊನೆಗೊಂಡಿದೆ. ಸಾತ್ವಿಕ್‌ಸಾಯಿ ರಾಜ್ ರಾನಿಕ್‌ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಎರಡನೇ ಸುತ್ತಿನ ಡಬಲ್ಸ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಸ್ಥಳೀಯ ಆಟಗಾರರಾದ ಮಾರ್ಕಸ್ ಫೆನಾಲ್ಡಿ ಗಿಡಿಯೊನ್ ಹಾಗೂ ಕೆವಿನ್ ಸಂಜಯ ಸುಕಮುಲ್ಜಿಯೊ ವಿರುದ್ಧ 15-21, 14-21 ಅಂತರದಿಂದ ಸೋತಿದ್ದಾರೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top