ಇಂಗ್ಲೆಂಡ್ ಕೋಚಿಂಗ್ ಕ್ಯಾಂಪ್ಗೆ ಮಾರ್ಕಸ್ ಟ್ರೆಸ್ಕೋಥಿಕ್ ಸೇರ್ಪಡೆ
ಲಂಡನ್, ಜು.24: ಬರ್ಮಿಂಗ್ಹ್ಯಾಮ್ನಲ್ಲಿ ಆ.1 ರಿಂದ ಆರಂಭವಾಗಲಿರುವ ಆ್ಯಶಸ್ ಸರಣಿಯ ಮೊದಲೆರಡು ಪಂದ್ಯಗಳಿಗಾಗಿ ನಡೆಯುವ ಇಂಗ್ಲೆಂಡ್ನ ಕೋಚಿಂಗ್ ಶಿಬಿರದಲ್ಲಿ ಮಾಜಿ ಆರಂಭಿಕ ಆಟಗಾರ ಮಾರ್ಕಸ್ ಟ್ರೆಸ್ಕೋಥಿಕ್ ಸೇರ್ಪಡೆಯಾಗಿದ್ದಾರೆ. ಈ ವರ್ಷಾಂತ್ಯದಲ್ಲಿ ಕ್ರಿಕೆಟ್ನಿಂದ ನಿವೃತ್ತಿಯಾಗುವುದಾಗಿ ಇತ್ತೀಚೆಗೆ ಟ್ರೆಸ್ಕೋಥಿಕ್ ಹೇಳಿಕೆ ನೀಡಿದ್ದರು. ಎಜ್ಬಾಸ್ಟನ್ ಹಾಗೂ ಲಾರ್ಡ್ಸ್ನಲ್ಲಿ ನಡೆಯುವ ಟೆಸ್ಟ್ ಕ್ರಿಕೆಟ್ಗೆ ಇಂಗ್ಲೆಂಡ್ನ ಕೋಚಿಂಗ್ ಶಿಬಿರದಲ್ಲಿ ಟ್ರೆಸ್ಕೋಥಿಕ್ ಕೆಲವು ಸಮಯ ಕಳೆಯಲಿದ್ದಾರೆ.
Next Story